
ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿಯ 169 ರಲ್ಲಿ ಹಾದು ಹೋಗುವ ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜ್ ಪಕ್ಕದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯ ಪರಿಣಾಮವಾಗಿ ಬೈಕ್ ಸವಾರನೊಬ್ಬ ನಿನ್ನೆ ರಾತ್ರಿ ಬಲಿಯಾದ ಘಟನೆ ನಡೆದಿದೆ.ಗಂಜಿಮಠದ ನಿವಾಸಿ ಅಬ್ದುಲ್ ಖಾದರ್ (69) ಮೃತಪಟ್ಟ ವ್ಯಕ್ತಿ.ಮಿಜಾರಿನಲ್ಲಿ ರಾ. ಹೆ. ಕಾಮಗಾರಿಯು ಅಪೂಣ೯ ಸ್ಥಿತಿಯಲ್ಲಿದ್ದು ಅಲ್ಲಿ ಮೋರಿಯ ದೊಡ್ಡ ಚರಂಡಿಗೆ ಅಡ್ಡವಾಗಿ ಹೊಂಡ ತೋಡಿ ಅದಕ್ಕೆ ಕಾಂಕ್ರೀಟ್ ಬೆಡ್ಡಿಂಗ್ ಹಾಕಲಾಗಿದ್ದು ಅಲ್ಲಿ ಯಾವುದೇ ಸೂಚನಾ ಫಲಕವನ್ನು ಅಳವಡಿಸಲಿಲ್ಲ. ಅಲ್ಲಿ ಹೊಂಡ ಇರುವುದು ರಾತ್ರಿ ಯಾರ […]
ಮೂಡುಬಿದಿರೆ: ಮೂಡುಬಿದಿರೆ ಜನರ ಪ್ರಮುಖ ಬೇಡಿಕೆಯಾಗಿದ್ದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಅಧಿಕೃತಗೊಳಿಸಲು ಇಂದು ಸ್ಥಳ ಪರಿಶೀಲನೆ ನಡೆಸಲಾಯಿತು.ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಪುರಸಭೆ, ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಜಂಟಿಯಾಗಿ ಮೂಡುಬಿದಿರೆ ರಾಜೀವ್ ಗಾಂಧಿ ವಾಣಿಜ್ಯ ಸಂರ್ಕೀಣದ ಮುಂಭಾಗದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.ಧರ್ಮಸ್ಥಳ-ಉಡುಪಿ, ಕಾರ್ಕಳ- ಮಂಗಳೂರು ರಾಜ್ಯ ಸಾರಿಗೆ ಬಸ್‌ಗಳು ಮೂಡುಬಿದಿರೆ ಮೂಲಕ ಸಂಚರಿಸುವಾಗ ಪ್ರಯಾಣಿಕರನ್ನು ಬಸ್‌ಗೆ ಹತ್ತಿಸಲು ಮತ್ತು ಇಳಿಸಲು ಈ ಬಸ್ ನಿಲ್ದಾಣವನ್ನು ಬಳಸಿಕೊಳ್ಳಲು ಈ ಸಂದರ್ಭದಲ್ಲಿ ನಿರ್ಧರಿಸಲಾಯಿತು.ರಸ್ತೆ ಬದಿಯ […]
ಮೂಡುಬಿದಿರೆ: ಕರಾವಳಿ ಕರ್ನಾಟಕದ ಕಣ್ಣಿನ ಆಸ್ಪತ್ರೆಗಳ ಪೈಕಿ ಅತೀ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿರುವ ಮತ್ತು ನೆರೆ ರಾಜ್ಯಗಳಾದ ಕೇರಳ, ಗೋವಾದಲ್ಲಿ ತನ್ನ ಚಿಕಿತ್ಸಾ ಕೇಂದ್ರಗಳನ್ನು ಹೊಂದಿರುವ ಪ್ರಸಾದ್ ನೇತ್ರಾಲಯದ ಮೂಡುಬಿದಿರೆಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ಮಾ. ೧೬ ರಂದು ಬೆಳಿಗ್ಗೆ ಮೂಡುಬಿದಿರೆಯ ಜೈನಪೇಟೆ ಬಡಗ ಬಸದಿ ಎದುರು ಇರುವ ಫಾರ್ಚೂನ್ -೨ ಕಟ್ಟಡದ ಮೊದಲ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕರಾದ ಡಾ.ಕೃಷ್ಣಪ್ರಸಾದ್ ಕೂಡ್ಲು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. […]
ಮೂಡುಬಿದಿರೆ: ಆಗಿನ ಸಚಿವರಾಗಿದ್ದ ನಾಗೇಶ್ ಅವರು ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ನಮ್ಮ ಕ್ಷೇತ್ರಕ್ಕೆ ೪೦ ರಿಂದ ೪೫ ಕೊಠಡಿಗಳನ್ನು ತಂದಿದ್ದು, ೩೦ ಕೊಠಡಿಗಳನ್ನು ಪ್ರಾಥಮಿಕ ಶಾಲೆಗೆ, ಹಾಗೂ ಮುಲ್ಕಿ, ಅಳಿಯೂರು, ಮಿಜಾರು ಭಾಗದಲ್ಲಿ ತಲಾ ೧ ಕೋಟಿಯಂತೆ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಶ್ರೀಮಂತ ವರ್ಗದ ಮಕ್ಕಳಿಗೂ, ಮಧ್ಯಮ ವರ್ಗದ ಮಕ್ಕಳಿಗೂ ಯಾವುದೇ ರೀತಿಯ ಭೇದ ಇರಬಾರದೆಂಬ ಉದ್ದೇಶದಿಂದ ಸರಕಾರಿ ಶಾಲೆÀಯ ಮಕ್ಕಳಿಗೂ ಉತ್ತಮ ಸೌಲಭ್ಯಗಳನ್ನು ಸಿಗಬೇಕು. ಇಂದು ಬಡ ಮಕ್ಕಳು, ಮಧ್ಯಮವರ್ಗದ ಮಕ್ಕಳು ವಿದ್ಯಾರ್ಜನೆಯಿಂದ ವಂಚಿತರಾಗಬಾರದೆAಬ ನಿಟ್ಟಿನಲ್ಲಿ […]
ಮೂಡುಬಿದಿರೆ: ಉಡುಪಿ -ಕಾಸರಗೋಡು 400 KV ವಿದ್ಯುತ್ ಮಾರ್ಗ ಕಾಮಗಾರಿ ನಡೆಸಲು UKTL -STERLITE ಕಂಪನಿಯವರು ಈ ದಿನ ಮತ್ತೆ ನಿಡ್ಡೋಡಿ ಮಂಜನಬೈಲು ಪ್ರದೇಶದ ಖಾಸಗಿ ಜಾಗಕ್ಕೆ ಮಂಗಳೂರಿನಿಂದ ಕರೆದುಕೊಂಡು ಬಂದ ಪೊಲೀಸ್ ಸಿಬ್ಬಂದಿಯೊಂದಿಗೆ ಅತಿಕ್ರಮಣ ಪ್ರವೇಶ ಮಾಡಿದ್ದು, ಇದನ್ನು ಪ್ರಶ್ನಿಸಿ ವಿರೋಧ ವ್ಯಕ್ತಪಡಿಸಿದ ಭೂಮಾಲಕರು ಮತ್ತು ಸ್ಥಳೀಯ ಜನರೊಂದಿಗೆ ಅಮಾನವೀಯ ರೀತಿಯಲ್ಲಿ ವರ್ತಿಸಿದ ಕಂಪನಿಯವರನ್ನು ಕಾಮಗಾರಿ ನಡೆಸದಂತೆ ತಡೆಯಲಾಯಿತು.ಈ ಸಂದರ್ಭದಲ್ಲಿ ಮೂಡಬಿದ್ರೆ ಪೊಲೀಸ್ ವೃತ್ತ ನಿರೀಕ್ಷಕರು ಸ್ಥಳಕ್ಕೆ ಆಗಮಿಸಿ ಕಂಪನಿಯವರಿಗೆ ಕಾನೂನು ರೀತಿಯಾಗಿ ಮುಂದುವರಿಯುವಂತೆ ಎಚ್ಚರಿಕೆ […]
ಮೂಡುಬಿದಿರೆ :ದೇಶ ಇಂದು ಜಾಗತಿಕ ಮಟ್ಟದಲ್ಲಿ ಎತ್ತರಕ್ಕೆ ಬೆಳೆಯುತ್ತಿದೆ. ನಮ್ಮ ದೇಶದ ಸಂವಿಧಾನವು ಅತ್ಯುನ್ನತವಾದುದು ಆದ್ದರಿಂದ ದೇಶ ಮತ್ತು ಸಂವಿಧಾನವನ್ನು ಗೌರವಿಸೋಣ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮೂಡುಬಿದಿರೆ ಇದರ ವತಿಯಿಂದ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆದ ೭೬ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಪಥಸಂಚಲನದ ಗೌರವ ರಕ್ಷೆಯನ್ನು ಸ್ವೀಕರಿಸಿ ಮಾತನಾಡಿದರು.ಮೂಡುಬಿದಿರೆಯಲ್ಲಿ ೭೭ ಕೋಟಿ ರೂಪಾಯಿ ವೆಚ್ಚದಲ್ಲಿ ಮನೆಮನೆಗೆ ಶುದ್ಧ ಕುಡಿಯುವ ನೀರು ಯೋಜನೆಯ ಕಾಮಗಾರಿಯು ಪ್ರಗತಿಯಲ್ಲಿದೆ. ೪.೫ಕೋಟಿ […]
ವಾಸ್ತು ತಜ್ಞ, ಚಂದ್ರಶೇಖರ ಸ್ವಾಮೀಜಿಯವರಿಗೆ ರಾಜ್ಯಮಟ್ಟದ ರಾಣಿ ಅಬ್ಬಕ್ಕ ಪ್ರಶಸ್ತಿ ಪ್ರದಾನ ಮೂಡುಬಿದಿರೆ: ಇಲ್ಲಿನ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಿತಿಯ ವತಿಯಿಂದ ಕಡಲಕೆರೆ ನಿಸರ್ಗಧಾಮದಲ್ಲಿ ಶನಿವಾರ ನಡೆದ ೨೨ನೇ ವರ್ಷದ ಕೋಟಿ ಚೆನ್ನಯ ಜೋಡುಕೆರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿರುವ ಆಧ್ಯಾತ್ಮಿಕ ಗುರು ಅಂತರಾಷ್ಟ್ರೀಯ ವಾಸ್ತು ತಜ್ಞ, ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ್ ಸ್ವಾಮೀಜಿ, ಅವರಿಗೆ ಕಂಬಳ ಸಮಿತಿಯ ಅಧ್ಯಕ್ಷ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾಧಿಕಾರಿ ಮುಲ್ಲೈ […]
ಮೂಡುಬಿದಿರೆ: ಕ್ಷೇತ್ರದಲ್ಲಿ ಟೆಂಟ್ ಹಾಕಿ, ಸಣ್ಣ-ಪುಟ್ಟ ಮನೆ ಕಟ್ಟಿ ಕುಳಿತಿರುವವರಿಗೆ ಡೀಮ್ಡ್ ಫಾರೆಸ್ಟ್ನ್ನು ತೆಗೆದುಹಾಕಿ, ತಹಶೀಲ್ದಾರ, ವಿ.ಎ ಹಾಗೂ ಆರ್.ಐ ಸಭೆ ಮಾಡಿ ಮೂಡುಬಿದಿರೆ ತಾಲೂಕಿನಲ್ಲಿ ಪ್ರತಿಯೊಬ್ಬರಿಗೂ ಹಕ್ಕುಪತ್ರ ಸಿಗಬೇಕೆಂಬುದು ಅವರಿಗೆ ಸ್ಪಷ್ಟ ಸೂಚನೆಯನ್ನು ಕೊಟ್ಟ ಪ್ರಕಾರ , ತಹಶೀಲ್ದಾರ, ವಿ.ಎ ಹಾಗೂ ಆರ್.ಐ ಗಳು ಮನೆ ಮನೆಗೆ ಹೋಗಿ ಸರ್ವೇ ಮಾಡಿ ೩೧೦ ಜನರಿಗೆ ಹಕ್ಕುಪತ್ರವನ್ನು ವಿತರಿಸುವುದೆಂದು ದಾಖಲೆಗಳನ್ನು ತಯಾರಿಸಿದ್ದು, ಆದರೆ ಇದೀಗ ನಾಳೆ ಮಂಗಳವಾರದಂದು ೩೧೦ ಮಂದಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ದಿನ […]
ಮೂಡುಬಿದಿರೆ : ಕನಾ೯ಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.)ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಭಾನುವಾರ ಕನ್ನಡ ಭವನದಲ್ಲಿ ನಡೆದ 37 ನೇ ವಾರ್ಷಿಕ ಸಮಾವೇಶವನ್ನು ಶಾಸಕ ಉಮಾನಾಥ್ ಎ ಕೋಟ್ಯಾನ್ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ರಾಜಕೀಯ ರಹಿತವಾಗಿ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ದೇಶದಲ್ಲೇ ನಂಬರ್ ವನ್ ಸಂಘಟನೆಯಾಗಿ ಯುವವಾಹಿನಿ ಘಟಕವು ಮೂಡಿ ಬರಲಿ ಎಂದು ಶುಭಹಾರೈಸಿದರು.ಹೈಕೋರ್ಟ್ ನ ನಾಮನಿರ್ದೇಶಿತ ಹಿರಿಯ ನ್ಯಾಯವಾದಿ ತಾರಾನಾಥ ಪೂಜಾರಿ ಮಾತನಾಡಿ ಅಧಿಕಾರವು […]