
ಮೂಡುಬಿದಿರೆ: ಅರೇಬಿಯಾದ ಜುಬೈಲ್‌ನಲ್ಲಿ ಬಸ್ ಓಡಿಸುತ್ತಿರುವ ಕಲ್ಲಬೆಟ್ಟುವಿನ ಮೂಡುಬಿದಿರೆ ಮೊಹ್ಮದ್ ಆಲಿ ಎಂಬುವರು ತನ್ನ ಬಸ್ ಹಿಂಬದಿಯ ಗಾಜಿನಲ್ಲಿ ‘ಬೆದ್ರ (ಮೂಡುಬಿದಿರೆ) ಎಂದು ಬರೆದು ಹುಟ್ಟೂರಿನ ಪ್ರೀತಿಯನ್ನು ತಾನು ಕೆಲಸ ಮಾಡುತ್ತಿರುವ ದೂರದ ಸೌದಿಯಲ್ಲಿ ಪಸರಿಸುತ್ತಿದ್ದಾರೆ. ಸೌದಿಯಲ್ಲಿ ಅವರು ಸ್ವಂತ ಬಸ್ ಹೊಂದಿದ್ದು ಮಕ್ಕಾ, ಮದೀನಾದಂತಹ ಪವಿತ್ರ ಕ್ಷೇತ್ರಕ್ಕೆ ಯಾತ್ರಾರ್ಥಿಗಳನ್ನು ಬಾಡಿಗೆಗೆ ಕರೆದೊಯ್ಯುತ್ತಿದ್ದಾರೆ. ಉಳಿದ ಸಮಯಗಳಲ್ಲಿ ಕಂಪನಿಗಳ ಕೆಲಸಗಳಿಗೂ ಬಸ್ ಅನ್ನು ಬಾಡಿಗೆ ಕೊಡುತ್ತಿದ್ದಾರೆ. ಹಲವು ವರ್ಷಗಳಿಂದ ಅವರು ಸೌದಿಯಲ್ಲಿ ನೆಲೆಸಿದ್ದಾರೆ.ಮೂಡುಬಿದಿರೆಯ ಕಲ್ಲಬೆಟ್ಟು ಗ್ರಾಮದ ಪಿಲಿಪಂಜರದವರಾಗಿರುವ ಮೊಹ್ಮದ್ […]
ಮೂಡುಬಿದಿರೆ: ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿರುವ ಮೂಡುಬಿದಿರೆಯ ದರೆಗುಡ್ಡೆ ಗ್ರಾಮದಲ್ಲಿನ ಪುರಾಣ ಪ್ರಸಿದ್ಧ ಮಹಾತೋಭಾರ ಶ್ರೀ ಸೋಮನಾಥೇಶ್ವರ ಕ್ಷೇತ್ರ ಇಟಲ ಇಲ್ಲಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪುತ್ರಿ ಶ್ರದ್ಧಾ ಅಮಿತ್ ರವರು ಕುಟುಂಬದೊಂದಿಗೆ ಭೇಟಿ ನೀಡಿ ದೇಗುಲ ವೀಕ್ಷಣೆ ಮಾಡಿದರು. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಹಾಗೂ ಈ ಕಾರ್ಯಕ್ಕೆ ಮಾಗಣೆಯ ಜನತೆ ತೋರುತ್ತಿರುವ ಉತ್ಸಾಹ ಕಂಡು ಸಂತಸ ವ್ಯಕ್ತಪಡಿಸಿದರು. ಈಗಾಗಲೇ ತಮ್ಮ ಕ್ಷೇತ್ರದ ವತಿಯಿಂದ ಭರಪೂರ ನೆರವು ಒದಗಿಸಿದ್ದು ಮತ್ತಷ್ಟು ಸಹಕರಿಸುವ ಭರವಸೆ ನೀಡಿದರು.ಮತ್ತು ಶ್ರಮ ಸೇವಕರ […]
ಮೂಡುಬಿದರೆ: ತಾಲೂಕಿನ ಪ್ರತಿಯೊಬ್ಬರ ಭೂ ಸಂಬಂಧ ದಾಖಲೆಗಳು ನಾಶವಾಗಬಾರದು, ಸ್ಥಳಾವಕಾಶದ ಕೊರತೆಯಿಂದ ಹಾಳಾಗಬಾರದು ಎನ್ನುವ ದೃಷ್ಟಿಯಿಂದ ಸರಕಾರದ ಯೋಜನೆಯಂತೆ ಡಿಜಿಟಲೀಕರಣ ಮಾಡಲು ನಿರ್ಧರಿಸಲಾಗಿದೆ. ಆ ಪ್ರಕಾರದಲ್ಲಿ ಪ್ರತಿಯೊಬ್ಬರ ಆರ್ ಟಿ ಸಿ, ಮ್ಯುಟೇಶನ್ ಇತ್ಯಾದಿ ಎಲ್ಲಾ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಿ ಸಂಗ್ರಹಿಸಿ ಇಡುವ ವ್ಯವಸ್ಥೆಯನ್ನು ಎರಡು ಮೂರು ತಿಂಗಳಲ್ಲಿ ಸಂಪೂರ್ಣ ಗೊಳಿಸಲಾಗುವುದು ಎಂದು ಮುಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದರು.ಅವರು ಬುಧವಾರ ತಾಲೂಕು ಕಚೇರಿಯ ಭೂ ಸುರಕ್ಷಾ ಯೋಜನೆ ಅಡಿ ಅಭಿಲೇಖಾಲಯದ ಕಂದಾಯ ದಾಖಲೆ ಗಣಕೀಕರಣಗೊಳಿಸುವ […]
ಮೂಡುಬಿದಿರೆ: 25 ವರ್ಷಗಳ ಕಂಬಳ ಕ್ಷೇತ್ರದ ಸಾಧನೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲ್ಯಾನ್ ಅವರಿಗೆ ಇರುವೈಲು ಪಾಣಿಲ ಅಭಿಮಾನಿ ಬಳಗದ ವತಿಯಿಂದ ನಾಳೆ ಸಂಜೆ 7 ಗಂಟೆಗೆ ಮೂಡುಬಿದಿರೆಯ ಕನ್ನಡ ಭವನದಲ್ಲಿ ಸನ್ಮಾನ ನಡೆಯಲಿದೆ. ಸನ್ಮಾನದ ಬಳಿಕ ‘ ಶಿವದೂತೆ ಗುಳಿಗೆ’ ನಾಟಕ ಪ್ರದರ್ಶನಗೊಳ್ಳಲಿದೆ.
ಮೂಡುಬಿದಿರೆ: ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ, ವೇದಘೋಷಗಳ ನಿನಾದ, ಭಜನೆಗಳು, ಪುಷ್ಪ ಪಲ್ಲಕ್ಕಿಗಳು, ಪ್ರೇಕ್ಷಕರ ಜಯ ಘೋಷ ಹಾಗೂ ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ರಥ ಎಡದಿಂದ ಬಲಕ್ಕೆ ಸಂಚರಿಸಿ ಸ್ವಸ್ಥಾನಕ್ಕೆ ಮರಳಿ, ಧ್ವಜ ಅವರೋಹಣದೊಂದಿಗೆ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘೩೦ನೇ ವಿರಾಸತ್’ನ ಸಾಂಸ್ಕೃತಿಕ ಕಾರ‍್ಯಕ್ರಮಗಳಿಗೆ ಶನಿವಾರ ರಾತ್ರಿ ತೆರೆ ಬಿತ್ತು.ಲೋಕ ಮಾರ್ಗದರ್ಶಕರಾದ ರಾಮ-ಕೃಷ್ಣರ ಮೂರ್ತಿ ಪ್ರತಿಷ್ಠಾಪಿಸಿದ ಸಾಂಸ್ಕೃತಿಕ ರಥವನ್ನು ಮುಖ್ಯ ವೇದಿಕೆಯ ಮುಂಭಾಗದಲ್ಲಿ ಎಡದಿಂದ ಬಲಕ್ಕೆ ಎಳೆಯಲಾಯಿತು.ಇದಕ್ಕೂ ಮೊದಲು ಸಣ್ಣ ರಥದಲ್ಲಿ ಗಣಪತಿ, ಪಲ್ಲಕ್ಕಿಯಲ್ಲಿ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ […]
ಮೂಡುಬಿದಿರೆ : ೨೦೨೩-೨೪ ಹಾಗೂ ೨೪-೨೫ ನೇ ಸಾಲಿನ ೧೫ನೇ ಹಣಕಾಸು ಯೋಜನೆಯ ಅನುದಾನ, ನಗರೋತ್ಥಾನ ಹಂತ-೪ ಎಸ್.ಎಫ್ .ಸಿ ಮುಕ್ತ ನಿಧಿ ಅನುದಾನ ಹಾಗೂ ಪುರಸಭಾ ನಿಧಿಯ ಅನುದಾನದಡಿ ಸಹಿತ ಒಟ್ಟು ರೂ ೫.೧೨ ಕೋ.ವೆಚ್ಚದಲ್ಲಿ ನಡೆಯಲಿರುವ ವಿವಿಧ ಕಾಮಗಾರಿಗಳಿಗೆ ಶಾಸಕ ಉಮಾನಾಥ ಎ.ಕೋಟ್ಯಾನ್ ಶನಿವಾರ ಪುರಸಭೆಯಲ್ಲಿ ಶಿಲಾನ್ಯಾಸಗೈದರು.ಶಿಲಾನ್ಯಾಸಗೈದು ಮಾತನಾಡಿದ ಕೋಟ್ಯಾನ್ ಅವರು ಪುರಸಭೆಯ ಆರ್ಥಿಕ ಸ್ಥಿತಿಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಒಂದು ಕೋ.ವೆಚ್ಚದಲ್ಲಿ ಮೂಡುಬಿದಿರೆಯ ಹೃದಯ ಭಾಗದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ. ಜ್ಯೋತಿನಗರದ ಬಳಿ ಎಂ.ಆರ್.ಘಟಕವನ್ನು […]
ಮೂಡುಬಿದಿರೆ: 1966 ರಲ್ಲಿ ಮೂಡುಬಿದಿರೆಯಲ್ಲಿ ಪ್ರಾರಂಭಗೊಂಡ ಎರಡನೇ ಪ್ರೌಢಶಾಲೆ ಬಾಬು ರಾಜೇಂದ್ರ ಪ್ರೌಢಶಾಲೆ. ಮಹಾವೀರ ಕಾಲೇಜಿನ ಆಡಳಿತ ಮಂಡಳಿಯಿಂದ ಪ್ರಾರಂಭಗೊಂಡ ಶಾಲೆಯಲ್ಲಿ ದೊಡ್ಡ ಕ್ರೀಡಾಂಗಣ, ಫುಟ್ಬಾಲ್ ಕೋರ್ಟ್, ಕೋಚಿಂಗ್ ಅವಕಾಶ, ಉಚಿತ ಶಾಲಾ ಸಮವಸ್ತ್ರ, ದೂರದ ವಿದ್ಯಾರ್ಥಿಗಳಿಗೆ ಉಚಿತ ರಿಕ್ಷಾ ಸೌಲಭ್ಯ ಅದೇ ರೀತಿ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಡಲಾಗುತ್ತಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.ಅವರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ಮಾಜಿ ಶಾಸಕರು, ಧರ್ಮಸ್ಥಳ ಯೋಜನೆ, ಹಳೆ ವಿದ್ಯಾರ್ಥಿಗಳು […]
ಬೆಂಗಳೂರು: ಆತಿಥ್ಯ ಕ್ಷೇತ್ರದಲ್ಲಿ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೆಸರಾಗಿರುವ ಎಂ.ಆರ್.ಜಿ.ಗ್ರೂಪ್ ಮತ್ತು ಮ್ಯಾರಿಯೆಟ್ ಹೊಟೇಲ್ಸ್ ಗಳು ನವ ಮುಂಬಯಿಯಲ್ಲಿ ಜಂಟಿಯಾಗಿ ಆತಿಥ್ಯೋದ್ಯಮಕ್ಕೆ ಶುಭಾರಂಭ ಮಾಡಿವೆ. ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 26 ಕಿ.ಮೀ. ದೂರದಲ್ಲಿರುವ ನವ ಮುಂಬಯಿ ಮ್ಯಾರಿಯೆಟ್ ಹೊಟೇಲ್ ವ್ಯಾಪಾರೋದ್ಯಮಿ ಪ್ರವಾಸಿಗರು ಮತ್ತು ರಜೆ ಸಮಯ ಕಳೆಯುವ ಪ್ರವಾಸಿಗರಿಗೆ ಅನುಕೂಲಕರ ತಾಣವಾಗಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಅತಿಥಿಗಳಿಗೂ ಇದು ಅಡೆ ತಡೆ ರಹಿತ ಪ್ರಯಾಣಕ್ಕೆ ಅನುಕೂಲಕರವಾದಂತಹ ಸ್ಥಳದಲ್ಲಿದೆ.ಮಹಾರಾಷ್ಟ್ರದ ಕಡಲ ಕಿನಾರೆ ಇಲ್ಲಿ […]