ಗುರುಕುಲ ಶಾಲೆಯಲ್ಲಿ ಶೈಕ್ಷಣಿಕ ಪರಿಕರಗಳ ವಿತರಣಾ ಸಮಾರಂಭ
ಮಾಳದ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಪರಿಕರಗಳ ವಿತರಣಾ ಕಾರ್ಯಕ್ರಮ ನಡೆಯಿತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಗುರುಕುಲ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶ್ರೀ ಗಜಾನನ ಮರಾಠೆ ಶಾಲಾ ಬೆಳವಣಿಗೆಯನ್ನು ವಿಶ್ಲೇಷಿಸಿದರು ಹೊಸದಾಗಿ ಸೇರ್ಪಡೆಯಾದ ಮಕ್ಕಳಿಗೆ ಪ್ರೋತ್ಸಾಹ ರೂಪವಾಗಿ ಕಳೆದ ಆರು ವರ್ಷಗಳಿಂದ ಒಂದು ಸಾವಿರ ರೂಪಾಯಿಗಳನ್ನು ಠೇವಣಿಗಾಗಿ ನೀಡುತ್ತಿರುವ ದಾನಿಗಳು ಗುರುಗಳಾದ ನಾಗಭೂಷಣ ಜೋಶಿ, ಸಮವಸ್ತ್ರ ಪ್ರಾಯೋಜಕರಾದ ಶ್ರೀ ರವಿ ಮರಾಠೆ ಶೃಂಗೇರಿ, ಕ್ರೀಡೋಪಕರಣಗಳನ್ನು ನೀಡುವಲ್ಲಿ ಸಹಕರಿಸಿದ ಪಂಚಾಯತ್ ಅಧ್ಯಕ್ಷರಾದ ಶ್ರೀ ಉಮೇಶ್ ಪೂಜಾರಿ ನೋಟ್ಸ್ ಪುಸ್ತಕಗಳಿಗೆ ದೇಣಿಗೆ ನೀಡಿದ ಯುವ ಶಕ್ತಿ ಗೆಳೆಯರ ಬಳಗದ ಪರವಾಗಿ ಶ್ರೀ ಸೂರಜ್ ನಾಯ್ಕ, ಶಿಪ್ಸಿ ಸ್ಮರಣಾರ್ಥ ಶಾಲಾ ಪರಿಕರಗಳನ್ನು ಕೊಡ ಮಾಡಿದ ಶ್ರೀ ಮೈಕಲ್, ಊಟದ ತಟ್ಟೆ ಮತ್ತು ಲೋಟಗಳನ್ನು ಕೊಡ ಮಾಡಿದ ಶುಭ ಗ್ರಾಫಿಕ್ಸ್ ನ ಶ್ರೀ ಸಂತೋಷ್ ಪೂಜಾರಿ, ಮುಖ್ಯೋಪಾಧ್ಯಾಯನಿ ಶ್ರೀಮತಿ ಪೂರ್ಣಿಮಾ ಶೆಣೈ ಆಡಳಿತ ಮಂಡಳಿಯ ಸದಸ್ಯರು ಶಿಕ್ಷಕರು ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು. ಕಾರ್ಯಕ್ರಮದ ಆರಂಭದಲ್ಲಿ ನಿನ್ನೆ ನಮ್ಮನ್ನಗಲಿದ ಹಳೆ ವಿದ್ಯಾರ್ಥಿ ಗಜಾನನ ಡೋಂಗ್ರೆ ಯವರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

ಹೊಸದಾಗಿ ಸೇರಿದ ಪೂರ್ವ ಪ್ರಾಥಮಿಕ ಎಲ್ ಕೆ ಜಿ ಮಕ್ಕಳಿಗೆ ಸರಸ್ವತಿ ಮಂದಿರದಲ್ಲಿ ವಿಧ್ಯುಕ್ತವಾಗಿ ಅಕ್ಷರಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು🙏🏻 ಹಿರಿಯ ಶಿಕ್ಷಕಿ ಶ್ರೀಮತಿ ಶೋಭಾ ಕಾರ್ಯಕ್ರಮ ನಿರೂಪಿಸಿದರು ಶ್ರೀಮತಿ ರಕ್ಷಿತಾ ಅತಿಥಿಗಳನ್ನು ಸ್ವಾಗತಿಸಿದರು ಶ್ರೀಮತಿ ಜ್ಯೋತಿ ವಂದನಾರ್ಪಣೆಗೈದರು.














