ಬಾಬು ರಾಜೇಂದ್ರ ಪ್ರಸಾದ ಪ್ರೌಢಶಾಲೆಯಲ್ಲಿ ಸಂಸತ್ತು ಮತ್ತು ಇತರ ಸಂಘಗಳ ಉದ್ಘಾಟನೆ

ಬಾಬು ರಾಜೇಂದ್ರ ಪ್ರಸಾದ ಪ್ರೌಢಶಾಲೆಯಲ್ಲಿ ಸಂಸತ್ತು ಮತ್ತು ಇತರ ಸಂಘಗಳ ಉದ್ಘಾಟನೆ

ದಿನಾಂಕ: 12-07-2024, ಶುಕ್ರವಾರ ಅಪರಾಹ್ನ 2.45 ಕ್ಕೆ, ಈ ಕಾರ್ಯಕ್ರಮವನ್ನು ಕುಮಾರಿ ಗಾನವಿ ನಿರ್ವಹಿಸಿದರು. ಪ್ರಾರ್ಥನೆಗೈಯುವ ಜವಾಬ್ದಾರಿಯನ್ನು ಶರಣ್ಯ, ಅನನ್ಯ, ಮತ್ತು ಕೃತಿ ಮಾಡಿದರು. ಆಕಾಶ ಸ್ವಾಗತ ಮಾತನಾಡಿದರು. ಸಂಸತ್ತಿನ ಕುರಿತು ಮಾಹಿತಿಯನ್ನು ಆಳ್ವಾಸ್ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಸುನೀಲ ನೀಡಿದರು.

ನಾಗವರ್ಮ ಜೈನ್, ಪುತ್ತಿಗೆ ಗ್ರಾಮದ ಮಾಜಿ ಪಂಚಾಯತ್ ಸದಸ್ಯರು, ಉದ್ಘಾಟನಾ ಸಮಾರಂಭವನ್ನು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸುಧಾರತ್ನಾಕರ್ ಉಪಸ್ಥಿತರಿದ್ದರು. ಶ್ರೀ ಸುನೀಲ್ ಮಾತನಾಡಿದ ಸಂದರ್ಭದಲ್ಲಿ, ಸಂಸತ್ತು ವಿವಾದಕ್ಕೆ ಇರುವುದಿಲ್ಲ, ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಇದು ಒಂದು ವೇದಿಕೆಯಾಗಿದೆ. ತಿಳುವಳಿಕೆಯಿಂದ ಮಾತ್ರ ಬೆಳವಣಿಗೆ ಸಾಧ್ಯವಾಗುತ್ತದೆ. ದೇಶದ ಹಣೆಬರಹ ಶಾಲಾಕೊಠಡಿಗಳಲ್ಲಿ ರೂಪುಗೊಳ್ಳುತ್ತದೆ. ನಮ್ಮ ಉದ್ದೇಶಗಳನ್ನು ಈಡೇರಿಸಲು ನಿರಂತರ ಪ್ರಯತ್ನ ಅಗತ್ಯ. ಮನುಷ್ಯತ್ವ ಬೆಳೆಸಿಕೊಳ್ಳಬೇಕು, ಮಾದರಿ ಜೀವನ ರೂಪಿಸಿಕೊಳ್ಳಬೇಕು, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಉದ್ಘಾಟಕರಾದ ನಾಗವರ್ಮ ಜೈನ್ ಮಾತನಾಡುತ್ತಾ, “ಬದುಕಿಗೆ ಗುರಿ ಇರಲಿ, ಅದಕ್ಕಾಗಿ ಹಠ ಇರಲಿ, ನಿರಂತರ ಪ್ರಯತ್ನ ಇರಲಿ, ಕುಟುಂಬ, ಶಾಲೆ, ದೇಶದ ಮೇಲೆ ಪ್ರೀತಿ ಇರಲಿ, ಎಲ್ಲರಿಗೂ ಒಳ್ಳೆಯದಾಗಲಿ” ಎಂದು ಹಾರೈಸಿದರು. ಶಾಲೆಯ ಹಿತೈಷಿಯಾದ ಶ್ರೀಮತಿ ಸುಧಾರತ್ನಾಕರ್ ಮಕ್ಕಳಿಗೆ, “ನಿಮ್ಮ ಕನಸುಗಳ ಬೆನ್ನಹತ್ತಿ ಮುಂದೆ ಹೋಗಿ ಪ್ರಯತ್ನ ಪಡಿ, ನಿಮ್ಮ ಗುರಿ ಈಡೇರುತ್ತದೆ” ಎಂದು ಪ್ರೇರಣೆ ನೀಡಿದರು. ಈ ಸಮಾರಂಭಕ್ಕೆ ಶಾಲೆಯ ಮುಖ್ಯೋಪಾಧ್ಯಾಯಿನಿ ತೆರೆಸಾ ಕರ್ಡೋಜ ಅಧ್ಯಕ್ಷತೆ ವಹಿಸಿದ್ದರು ಮತ್ತು ಶಾಲಾ ಉಪನಾಯಕ ಕುಮಾರ್ ಶಶಾಂಕ್ ಧನ್ಯವಾದಗಳನ್ನು ಸಲ್ಲಿಸಿದರು.

ADVRTISEMENT