ಮಾನವೀಯತೆಯೇ ಭಾರತೀಯತೆಎಕ್ಸಲೆಂಟ್ ಸ್ವಾತಂತ್ರೋತ್ಸವದಲ್ಲಿ ಯು ಟಿ ಖಾದರ್ ಅಭಿಮತ

ಮೂಡುಬಿದಿರೆ : ಬಲಿಷ್ಠ ಭಾರತ ನಿರ್ಮಾಣ ಸಶಕ್ತ ವಿದ್ಯಾರ್ಥಿ
ಸಮುದಾಯದ ದೃಢ ಸಂಕಲ್ಪದಿAದ ಸಾಧ್ಯ. ಬಲಿಷ್ಠ ವಿದ್ಯಾರ್ಥಿ
ಸಮುದಾಯದ ಕಲ್ಪನೆ ರಾಷ್ಟçಭಕ್ತಿಯ ಬದ್ಧತೆಯುಳ್ಳ
ಶಿಕ್ಷಣ ಸಂಸ್ಥೆಯಿAದ ಸಾಕಾರಗೊಳ್ಳುತ್ತದೆ. ಪ್ರಸ್ತುತ
ಕಾಲಘಟ್ಟದಲ್ಲಿ ಶಿಕ್ಷಣ ಸಂಸ್ಥೆಯ ಸ್ಥಾಪಕರು ನಿಜವಾದ
ದೇಶಭಕ್ತರು ಎಂದು ಕರ್ನಾಟಕ ವಿಧಾನಸಭೆಯ
ಸಭಾಧ್ಯಕ್ಷರಾದ ಶ್ರೀ ಯು ಟಿ ಖಾದರ್ ಸ್ವಾತಂತ್ರೋತ್ಸವದ
ಸAದೇಶ ನೀಡಿದರು. ಅವರು ಮೂಡುಬಿದಿರೆ ಎಕ್ಸಲೆಂಟ್ ಸಮೂಹ
ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸ್ವಾತಂತ್ರೋತ್ಸವದ ಶುಭ
ಸಂದರ್ಭದಲ್ಲಿ ನಡೆದ ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ ಮತ್ತು
ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ
ಭಾಗವಹಿಸಿ ಮಾತನಾಡಿದರು. ಭಾರತ ಹಿಂದಿನಿAದಲೂ ಮಾನವೀಯತೆ,
ಸಂಸ್ಕೃತಿ, ಮೌಲ್ಯಯುತ ಜೀವನಕ್ಕೆ ಆದರ್ಶವಾದ ದೇಶ.
ಸ್ವತಂತ್ರ ಭಾರತದ ಸಂವಿಧಾನ ಪ್ರತಿಯೊಬ್ಬ ಪ್ರಜೆಯೂ
ನೆಮ್ಮದಿಯ ಬದುಕನ್ನು ನಡೆಸಲು ಅವಕಾಶ ಕಲ್ಪಿಸಿದೆ.
ವಿದ್ಯಾರ್ಥಿಗಳು ಬದ್ಧತೆಯ ಶೈಕ್ಷಣಿಕ ಬದುಕಿನೊಟ್ಟಿಗೆ ಪ್ರೀತಿ,
ವಿಶ್ವಾಸದ ಆಧಾರದಲ್ಲಿ ಸಮಾನತೆ ಸೌಹಾರ್ದತೆಯ ಗುಣವನ್ನು
ರೂಢಿಸಿಕೊಳ್ಳಬೇಕು. ಉತ್ತಮ ಅಂಕಗಳ ಜೊತೆಗೆ
ಕಾರ್ಯದಕ್ಷತೆ, ಕೌಶಲವನ್ನು ಹೆಚ್ಚಿಸಿಕೊಂಡು ಉತ್ತಮ
ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಭವ್ಯ ಭಾರತ ಕಟ್ಟಬೇಕು.
ಎತ್ತರ ಏರಿದಾಗ ಮೆಟ್ಟಿಲುಗಳನ್ನು ನೆನಪಿಸಿಕೊಳ್ಳಬೇಕು ಎಂದು
ಸ್ಫೂರ್ತಿಯುತ ಮಾತುಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ನೂತನವಾಗಿ
ಸ್ಥಾಪನೆಯಾದ ೨೨೫ ಕಿ.ವಾಟ್ ಸಾಮರ್ಥ್ಯದ ಸೋಲಾರ್ ವಿದ್ಯುತ್
ಘಟಕದ ಉದ್ಘಾಟನೆಯನ್ನು ನೆರವೇರಿಸಿದ ಅದಮ್ಯ ಚೇತನ
ಫೌಂಡೇಶನ್ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್
ಅವರು ಮಾತನಾಡುತ್ತ ಎಕ್ಸಲೆಂಟ್ ಸಂಸ್ಥೆಯು ಸೌರ ವಿದ್ಯುತ್
ಘಟಕದ ಸ್ಥಾಪನೆಯ ಮೂಲಕ ಸೌರ ಶಕ್ತಿ ಉತ್ಪಾದನೆಯ
ದೊಡ್ಡ ಕೇಂದ್ರವಾಗಿ ಗುರುತಿಸಿಕೊಂಡು ಪ್ರಕೃತಿ
ರಕ್ಷಣೆಯ ಆಂದೋಲನಕ್ಕೆ ದಾಪುಗಾಲಿರಿಸಿದೆ. ವಿಶಾಲವಾದ
ಪರಿಸರದಲ್ಲಿ ಬಳಕೆ ಮಾಡಿದ ನೀರನ್ನು ವ್ಯರ್ಥವಾಗದಂತೆ
ಗಿಡಗಳನ್ನು ಬೆಳೆಸುವಲ್ಲಿ ಸದ್ಬಳಕೆಯಾಗುತ್ತಿದೆ. ನಿಜವಾದ
ಸ್ವಾತಂತ್ರೋತ್ಸವದ ಹಬ್ಬವೆಂದರೆ ಪ್ರಕೃತಿ ಶಕ್ತಿಯ
ಸದ್ವಿನಿಯೋಗವಾಗಿದೆ. ಜಾಗತಿಕ ತಾಪಮಾನದ ಅತಿರೇಕದಲ್ಲಿ

ವಾತಾವರಣದ ಧನಾತ್ಮಕ ಬದಲಾವಣೆಗೆ ಇಂತಹ ಕಾಯಕಲ್ಪಗಳ
ಅಗತ್ಯತೆ ಹೆಚ್ಚಿದೆ ಎಂದರು. ಸಂಸ್ಥೆಯ ಪ್ರಸಕ್ತ ವರ್ಷದ
ಅಭಿಯಾನವಾದ ಸಸ್ಯ ಶ್ಯಾಮಲಾದ ಅಂಗವಾಗಿ ಒಂದು ಸಾವಿರನೇ
ಗಿಡವನ್ನು ನೆಡುವ ಮೂಲಕ ಬೃಹತ್ ಅಭಿಯಾನವನ್ನು
ಪೂರ್ಣಗೊಳಿಸಿ ಗಿಡ ನೆಡುವ ಕಾರ್ಯಕ್ರಮ ಸಾವಿರದ
ಕಾರ್ಯಕ್ರಮವಾಗಲಿ. ಸಸ್ಯಾಗ್ರಹ ಆಂದೋಲನದ ಮೂಲಕ
ನಿರಂತರ ಪ್ರಕೃತಿಯ ಸೇವೆ ನಡೆಯಲಿ. ವೈಯಕ್ತಿಕ
ಸಾಮಾಜಿಕ ಹೊಣೆಗಾರಿಕೆ ಪ್ರತಿಯೊಬ್ಬರಲ್ಲೂ ಜಾಗೃತವಾಗಲಿ ಎಂದು
ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಧಾನ ಪರಿಷತ್ ಮಾಜಿ ಸದಸ್ಯರಾದ
ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ ಸ್ವಾತಂತ್ರೋತ್ಸವದ ಸವಿನೆನಪಿನಲ್ಲಿ
ಹಕ್ಕುಗಳ ಜೊತೆಗೆ ಕರ್ತವ್ಯಗಳ ಬಗ್ಗೆ ಹೆಚ್ಚು
ಯೋಚಿಸುವಂತಾಗಬೇಕು. ಈ ಹಬ್ಬ ಧ್ವಜಾರೋಹಣಕ್ಕೆ
ಸೀಮಿತವಾಗದೇ ಧ್ವಜದಡಿಯಲ್ಲಿ ದೇಶಸೇವೆಯ ಸಂಕಲ್ಪ
ತೊಟ್ಟು ಕಾರ್ಯಪ್ರವೃತ್ತರಾಗಬೇಕು. ನನ್ನ ಪರಿಶ್ರಮದಿಂದ
ನನ್ನ ಸಾಧನೆಯಿಂದ ನನ್ನ ಸಮಾಜ ನನ್ನ ದೇಶ ಹೆಮ್ಮೆ
ಪಡುವಂಥ ಕಾಯಕ ನಮ್ಮದಾಗಬೇಕು ಎಂದು ದೇಶ
ಪ್ರೇಮದ ಪ್ರೇರಣೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವರಾದ
ಅಭಯಚಂದ್ರ ಜೈನ್ ಅವರು, ಶಿಕ್ಷಣವೇ ದೊಡ್ಡ ಆಸ್ತಿ.
ಶೈಕ್ಷಣಿಕ ಸಾಧಕನಿಗೆ ಸಮಾಜದಿಂದ ಬಹು ದೊಡ್ಡ ಮನ್ನಣೆ
ದೊರಕುತ್ತದೆ. ಶಿಕ್ಷಣದ ಸಹಕಾರದಿಂದ ಪ್ರತಿಯೊಬ್ಬ ಪ್ರಜೆ
ಪರೋಪಕಾರದ ಚಿಂತನೆಯಲ್ಲಿ ಸಮಾಜವನ್ನು ಕಟ್ಟಿ
ಬೆಳೆಸಬೇಕು ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಸ್ವಾಗತಿಸಿ
ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಬಹುಮೂಲ್ಯ
ಉಪಕ್ರಮವಾಗಿ ಪ್ರಾಕೃತಿಕ ಸಂಪತ್ತನ್ನು ಪೋಷಿಸುವ
ಕಾಯಕಲ್ಪದಡಿ “ಸಸ್ಯ ಶ್ಯಾಮಲಾ” ಎಂಬ ಘೋಷವಾಕ್ಯದ ಜೊತೆ
ಒಂದು ಸಾವಿರ ಗಿಡ ನೆಡುವ ಬೃಹತ್ ಅಭಿಯಾನದ ಕುರಿತು
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ತಮ್ಮ ಅನಿಸಿಕೆಗಳನ್ನು
ವ್ಯಕ್ತಪಡಿಸಿ ಪ್ರಕೃತಿ ರಕ್ಷಿಸಿ ಭವಿಷ್ಯ ಉಳಿಸಿ ಎಂಬ ಘೋಷಣೆ
ಮೊಳಗಿಸಿದರು.
ಈ ಸಂದರ್ಭದಲ್ಲಿ ಕಳೆದ ಸಾಲಿನ ಹತ್ತನೇ ತರಗತಿ, ದ್ವಿತೀಯ
ಪಿಯುಸಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್, ಜೆಇಇ
ಮತ್ತು ಸಿಇಟಿ ಪರಿಕ್ಷೆಗಳಲ್ಲಿ ಸಾಧನೆಗೈದ ಸಂಸ್ಥೆಯ

ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನದ ಜೊತೆಗೆ
ಸಮ್ಮಾನಿಸಲಾಯಿತು. ಸಂಸ್ಥೆಯ ವಾರ್ಷಿಕ ಸಂಚಿಕೆ ಮೌಲ್ಯ
ಲೋಕಾರ್ಪಣೆ ಕಾರ್ಯಕ್ರಮ ನೆರವೇರಿತು.
ವೇದಿಕೆಯಲ್ಲಿ ಚೌಟರ ಅರಮನೆಯ ಕುಲದೀಪ್ ಎಂ, ಪ್ರಾಂಶುಪಾಲ
ಪ್ರದೀಪ್ ಕುಮಾರ್ ಶೆಟ್ಟಿ, ಅಃSಇ ಶಾಲೆ ಪ್ರಾಂಶುಪಾಲ ಸುರೇಶ್
ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ಜಯಲಕ್ಷಿ÷್ಮÃ, ವಿಲ್ಮಾ
ರೋಡ್ರಿಗಸ್, ವೇಲಂಟೈನಾ ಮಿರಾಂಡಾ ಸಮ್ಮಾನಿತ ವಿದ್ಯಾರ್ಥಿಗಳ
ಹೆಸರನ್ನು ವಾಚಿಸಿದರು. ಡಾ. ವಾದಿರಾಜ ಕಲ್ಲೂರಾಯ ಮತ್ತು
ನಿರಂಜನ್ ಅತಿಥಿಗಳನ್ನು ಪರಿಚಯಿಸಿದರು. ಮುಖ್ಯೋಪಾಧ್ಯಾಯ
ಶಿವಪ್ರಸಾದ್ ಭಟ್ ವಂದಿಸಿದರು. ಉಪನ್ಯಾಸಕರಾದ ವಿಕ್ರಮ್
ನಾಯಕ್ ಮತ್ತು ರೇಣುಕಾಚಾರ್ಯ ಕಾರ್ಯಕ್ರಮ
ನಿರೂಪಿಸಿದರು.

ADVRTISEMENT

Leave a Reply

Your email address will not be published. Required fields are marked *