ಮೂಡುಬಿದಿರೆ : ದ.ಕ.ಜಿ. ಪಂಚಾಯತ್ ಮಂಗಳೂರು. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆರ್. ಐ. ಡಿ. ಎಫ್ -೨೮ರಲ್ಲಿ ಮಂಜೂರಾದ ತಾಲೂಕಿನ ಮೂಡುಬಿದಿರೆ ಮತ್ತು ಶಿತಾ೯ಡಿಯಲ್ಲಿ ತಲಾ ಐವತ್ತಮೂರುವರೆ ಲಕ್ಷ ವೆಚ್ಚದಲ್ಲಿ ನಿಮಾ೯ಣಗೊಳ್ಳಲಿರುವ ಪಶು ಚಿಕಿತ್ಸಾಲಯದ ನೂತನ ಕಟ್ಟಡಕ್ಕೆ ಶಾಸಕ ಉಮಾನಾಥ ಎ. ಕೋಟ್ಯಾನ್ ಶುಕ್ರವಾರ ಶಿಲಾನ್ಯಾಸಗೈದರು.
ನಂತರ ಮಾತನಾಡಿದ ಶಾಸಕ ಕೋಟ್ಯಾನ್ ಹಿಂದಿನ ಸರ್ಕಾರದ ಅವಧಿಯಲ್ಲಿ ನೂತನ ಪಶು ಚಿಕಿತ್ಸಾ ಆಸ್ಪತ್ರೆಗೆ ೫೩.೧೬ ಲಕ್ಷ ವೆಚ್ಚದಲ್ಲಿ ಅನುದಾನ ಬಿಡುಗಡೆಗೊಂಡಿದ್ದು, ಇದೀಗ ಹಳೆಯ ಕಟ್ಟಡವನ್ನು ದುರಸ್ತಿಗೊಳಿಸಿ ನೂತನ ಪಶು ಆಸ್ಪತ್ರೆಯನ್ನು ನಿರ್ಮಾಣಕ್ಕಾಗಿ ಮೂಡುಬಿದಿರೆ ಹಾಗೂ ಶಿರ್ತಾಡಿ ವಲಯದಲ್ಲಿನ ಪಶು ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಕಟ್ಟಡವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕಿದೆ. ಎಲ್ಲಾ ಜನರು, ರೈತರು ಈ ಪಶುಆಸ್ಪತ್ರೆಯ ಪ್ರಯೋಜನವನ್ನು ಪಡೆದುಕೊಳ್ಳಿ ಎಂದರು.
ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸದಸ್ಯರಾದ ರಾಜೇಶ್ ನಾಯ್ಕ್, ನವೀನ್ ಶೆಟ್ಟಿ, ಸೌಮ್ಯ ಶೆಟ್ಟಿ, ಪ್ರಸಾದ್ ಭಂಡಾರಿ, ಶಿತಾ೯ಡಿ ಗ್ರಾ. ಪಂ. ಅಧ್ಯಕ್ಷೆ ಆಗ್ನೇಸ್ ಡಿ’ಸೋಜ, ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸಂತೋಷ್, ಪ್ರವೀಣ್ ಕುಮಾರ್ ಜೈನ್, ಸಂತೋಷ್, ತಾಲೂಕು ಕಾಯ೯ನಿವ೯ಹಣಾಧಿಕಾರಿ ಕುಸುಮಾಧರ, ಜಿಲ್ಲಾ ಸಹಾಯಕ ಪಶು ಉಪನಿದೇ೯ಶಕ ಡಾ. ಅರುಣ್ ಕುಮಾರ್ ಶೆಟ್ಟಿ, ಹಿರಿಯ ಪಶು ಡಾ. ಮಲ್ಲಿಕಾರ್ಜುನ ರಾಯಪ್ಪ ಈಳಿಗೇರ, ಎಂಜಿನಿಯರ್ ದತ್ತಾತ್ರೆಯ ಕುಲಕಣಿ೯ ಮತ್ತಿತರರು ಈ ಸಂದಭ೯ದಲ್ಲಿದ್ದರು.

Leave a Reply