ಬಜ್ಪೆ: ಇಲ್ಲಿನ ಹೊಸದಾಗಿ ಪ್ರಾರಂಭಗೊAಡ ಅಶೋಕ್ ನಾಯ್ಕ್ ಕಳಸಬೈಲು ಇವರ ಮಾರ್ಗದರ್ಶನದಲ್ಲಿ ೫೦ನೇ ಭಜನಾ ತಂಡ ವಿಶ್ವಕರ್ಮ ಭಜನಾ ಮಂಡಳಿ ಬಜ್ಪೆ ತಂಡವು ಶನಿವಾರ ಶ್ರೀ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ,(ರಿ) ಬಜ್ಪೆ ಇಲ್ಲಿ ಉದ್ಘಾಟನೆಗೊಂಡಿತು.
ಈ ಸಂದರ್ಭದಲ್ಲಿ ಚಿಕ್ಕ ವಯಸ್ಸಿನಲ್ಲಿ ಭಜನೆಯಲ್ಲಿ ಸಾಧನೆ ಮಾಡಿದ ಉತ್ತಮ ಭಜನಾ ತರಬೇತಿದಾರರಾದ ನವ್ಯ ಎಡಪದವು, ಕಂಜೂರವಾದಕ -ಕೀರ್ತನ್, ಉತ್ತಮ ಹಾಡುಗಾರ್ತಿ- ಪ್ರೀತಿಕ, ಇವರನ್ನು ಸಂಘದ ಪರವಾಗಿ ಗೌರವಿಸಲಾಯಿತು
ಮಂಡಳಿಯ ಅಧ್ಯಕ್ಷರಾದ ಬಿ ವೈ ರಮೇಶ ಆಚಾರ್ಯ ಹಾಗೂ ಉಪಾಧ್ಯಕ್ಷರಾದ ಎಸ್ ಆರ್ ಪ್ರಸಾದ ಆಚಾರ್ಯ, ಕೋಟೆಬಾಗಿಲು ಮಹಮ್ಮಾಯಿ ಸೇವಾ ಭಜನಾ ಮಂಡಳಿ ಇದರ ಅಧ್ಯಕ್ಷ ಭಾಸ್ಕರ್ ಕುಲಾಲ್, ಭಜಕರಾದ ಅರುಷಿ, ಸಮೀಕ್ಷಾ, ಹರ್ಷಿತ್, ಹಾಗೂ ಸಂಘದ ಪದಾಧಿಕಾರಿಗಳು ಸದಸ್ಯರು ಮತ್ತು ಯಶಸ್ವಿನಿ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Leave a Reply