ಮೂಡುಬಿದಿರೆ: ತಾಲೂಕಿಗೆ ಸರಕಾರಿ ಬಸ್ಸು ಬೇಕೆಂದು ಇಲ್ಲಿನ ಜನರ ಬಹುಕಾಲದ ಬೇಡಿಕೆ. ಆದರೆ ಹಲವಾರು ವರುಷಗಳಿಂದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಭಾರತೀಯ ರೈತ ಸೇನೆಯು ಹಲವಾರು ಬಾರಿ ಮನವಿಯನ್ನು ಸಂಬAಧಪಟ್ಟ ಇಲಾಖೆಗೆ ನೀಡಿದರೂ ಸ್ಪಂದಿಸದೇ ಇದ್ದಾಗ ಕಾನೂನಾತ್ಮಕ ಹೋರಾಟವನ್ನು 04/03/2023 ರಂದು ಕರ್ನಾಟಕ ಲೋಕಾಯುಕ್ತ ನ್ಯಾಯಲಕ್ಕೆ ದೂರು ಅರ್ಜಿ ಸಲ್ಲಿಸಲಾಯಿತು. ಸದ್ರಿ ದೂರು ಅರ್ಜಿಯು ನ್ಯಾಯಾಲಯದ ಪ್ರಕರಣ ಸಂಖ್ಯೆ: LOK/MYS/10393/2023 ರಂತೆ ಪ್ರಕರಣ ದಾಖಲಾಗಿ, ವಿಚಾರಣೆ ನಡೆಯುತ್ತಿರುವಾಗಲೇ ಮಂಗಳೂರಿನಿಂದ ಮೂಡುಬಿದಿರೆಗೆ ಸರಕಾರಿ ಬಸ್ಸು ಓಡಾಡುವಂತಾಯಿತು ಎಂದು ಭಾರತೀಯ ರೈತ ಸೇನೆ(ರಿ) ಯ ದ.ಕ ಜಿಲ್ಲಾ ಸಂಘದ ಅಧ್ಯಕ್ಷ ಹರಿಪ್ರಸಾದ್ ನಾಯಕ್ ಹೇಳಿದರು.
ಅವರು ಗುರುವಾರ ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಈ ನಡುವೆ ನಮ್ಮ ಸಂಘದ ನಿರಂತರ ಮನವಿಗೆ ಸ್ಪಂದಿಸಿದ ಕರ್ನಾಟಕ ಸರ್ಕಾರದ ಸರ್ಕಾರಿ ಸಾರಿಗೆ ವ್ಯವಸ್ಥೆಯಲ್ಲಿರುವ ಸೌಲಭ್ಯವನ್ನು ಮಂಗಳೂರು, ಮೂಡಬಿದಿರೆ, ಕಾರ್ಕಳ ಮಾರ್ಗವಾಗಿ ವ್ಯವಸ್ಥೆ ಮಾಡಿರುವುದರಿಂದ, ಸರ್ಕಾರದ ಸೌಲಭ್ಯವು ಮೂಡಬಿದಿರೆ ಜನತೆಗೆ ಸಿಗುವಂತಾಗಿದ್ದು ಇದರ ಫಲವಾಗಿ ಗುರುವಾರ ಬೆಳಿಗ್ಗೆ ಸರಕಾರಿ ಬಸ್ಸು ಮೂಡುಬಿದಿರೆಗೆ ಬಂದಾಗ ಸಂಘವು ಸ್ವಾಗತಿಸಿದೆ ಎಂದ ಅವರು ಲಾಭಿಯ ಮದ್ಯ ಕರ್ನಾಟಕ ಸರ್ಕಾರದ ಸರ್ಕಾರಿ ಸಾರಿಗೆ ವ್ಯವಸ್ಥೆಯಲ್ಲಿರುವ ಸೌಲಭ್ಯವನ್ನು ಮಂಗಳೂರು, ಮೂಡಬಿದಿರೆ, ಕಾರ್ಕಳದ ಜನರಿಗೆ ವ್ಯವಸ್ಥೆ ಮಾಡಿಕೊಟ್ಟಿರುವ ಸರ್ಕಾರಕ್ಕೆ ಸಹಕರಿಸಿದ ಎಲ್ಲಾ ಜನ ಪ್ರತಿನಿಧಿಗಳಿಗೆ ಭಾರತೀಯ ರೈತಸೇನೆ ಸಂಘದ ವತಿಯಿಂದ ಧನ್ಯವಾದ ಸಲ್ಲಿಸುತ್ತಿದ್ದೇವೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಡಬಿದಿರೆ ವಿಶ್ವ ವಿಖ್ಯಾತ ಸಾವಿರ ಕಂಬದ ಬಸದಿಯನ್ನು ಸೇರಿ ೧೮ ಬಸದಿ, ೧೮ ಕೆರೆ, ೧೮ ದೇವಸ್ಥಾನಗಳು, ೧೧ ಚರ್ಚಗಳು, ೧೫ ಮಸೀದಿಗಳು, ೧೮ ಕೂಡು ರಸ್ತೆಗಳನ್ನು ಹೊಂದಿರುವ ಐತಿಹಾಸಿಕ ಪ್ರದೇಶವಾಗಿದೆ. ಇದಲ್ಲದೆ ೧೪೫ ಶಿಕ್ಷಣ ಸಂಸ್ಥೆಗಳು, ೨ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮೂಡಬಿದಿರೆ ತಾಲೂಕಿನ ಜನತೆಗೆ ಸರ್ಕಾರದ ಸಾರಿಗೆ ಯೋಜನೆಗಳಾದ ಹಿರಿಯ ನಾಗರಿಕರಿಗೆ ೨೫% ರಿಯಾಯಿತಿ ಬಸ್ಸು ಪಾಸ್ ಸಾರ್ವಜನಿಕರ ದಿನನಿತ್ಯದ ಕೆಲಸಕ್ಕಾಗಿ ಅನುಕೂಲವಾಗುವ ಸಾರಿಗೆ ಮಾಸಿಕ ಬಸ್ಸು ಪಾಸ್, ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ಸ್ವಾತಂತ್ರ‍್ಯ ಹೋರಾಟಗಾರರಿಗೆ, ಎಂಡೋಸಲ್ಫಾನ್ ಪೀಡಿತ ವ್ಯಕ್ತಿಗಳಿಗೆ ಉಚಿತ ಬಸ್ ಪಾಸ್, ಅಂಧರಿಗೆ ಬಸ್ ಪಾಸ್ ಪತ್ರಕರ್ತರಿಗೆ ಬಸ್ ಪಾಸ್ ನಿವೃತ್ತ ನೌಕರರ ಬಸ್ ಪಾಸ್, ವ್ಯವಸ್ಥೆ, ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಘವು ಸಂಬAಧಪಟ್ಟ ಇಲಾಖೆಗೆ ಹಲವಾರು ಮನವಿಗಳನ್ನು ನೀಡಿತ್ತು. ಆದರೆ ಇದೀಗ ಕಾನೂನಾತ್ಮಕ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ ಕೊನೆಗೂ ತಾಲೂಕಿನಾದ್ಯಾಂತ ಸರ್ಕಾರಿ ಬಸ್ಸು ಓಡಾಡಲು ಅನುವು ಮಾಡಿ ಕೊಟ್ಟಿರುವುದರು ಈ ಭಾಗದ ಜನರಿಗೆ ಸಂತೋಷಕರವಾದ ವಿಚಾರ ಎಂದು ಹೇಳಿದರು.
ಉಪಾಧ್ಯಕ್ಷ ಎಂ. ರಮೇಶ್ ಬೋಧಿ, ಸಂಘಟನಾ ಕಾರ್ಯದರ್ಶಿ ಶಿವರಾಮ್ ಜೈ ಶೆಟ್ಟಿ, ಜೊತೆ ಸಂಘಟನಾ ಕಾರ್ಯದರ್ಶಿ ವಿಶ್ವನಾಥ ಬೋವಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.















Leave a Reply