ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಳ್ಳಾಲ್‍ಬಾಗ್5 ಕುಟುಂಬಗಳಿಗೆ ವೈದ್ಯಕೀಯ ನೆರವು

ದ್ರೋಳಿ,ಜೂ.1: ಉದಯ ಪೂಜಾರಿ ಬಳ್ಳಾಲ್ ಬಾಗ್ ನೇತೃತ್ವದಲ್ಲಿ ಫ್ರೆಂಡ್ಸ್ ಬಳ್ಳಾಲ್‍ಬಾಗ್ ,ಬಿರುವೆರ್ ಕುಡ್ಲದ ವತಿಯಿಂದ ಐದು ಅರ್ಹ ಕುಟುಂಬಗಳ ಸದಸ್ಯರ ವೈದ್ಯಕೀಯ ನೆರವಿಗೆ ಆರ್ಥಿಕ ಸಹಾಯ ವಿತರಣೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ವಠಾರದಲ್ಲಿ ಜರಗಿತು

ವಿಧಾನ ಸಭೆಯ ಸಭಾಪತಿ ಯು.ಟಿ ಖಾದರ್ ಅವರು ಫಲಾನುಭವಿಗಳಿಗೆ ಚೆಕ್ ವಿತರಿಸಿ
ಕಳೆದ ಹತ್ತು ವರ್ಷಗಳಿಂದ ಯಾವುದೇ ಜಾತಿ ಮತ ವನ್ನು ನೋಡದೆ ಬಡ ವರ್ಗಕ್ಕೆ ಆರ್ಥಕ ನೆರವು ಹಾಗೂ ಅರ್ಹ ಬಡ ಕುಟುಂಬಕ್ಕೆ ಮನೆ ಕಟ್ಟಿ ಕೊಡುವ ಮೂಲಕ ಮಾದರಿ ಸಮಾಜ ಸೇವೆ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಉದಯ ಪೂಜಾರಿ ಬಳ್ಳಾಲ್‍ಬಾಗ್ ನೇತೃತ್ವದಲ್ಲಿ ಈ ಸಂಸ್ಥೆ ಅಸ್ಥಿತ್ವಕ್ಕೆ ಬಂದಾಗಿನಿಂದ ಸುಮಾರು 10 ಕೋ.ರೂಗಳಷ್ಟು ನಿಧಿಯನ್ನು ಅಶಕ್ತರ ಚಿಕಿತ್ಸೆಗೆ, ಶಿಕ್ಷಣಕ್ಕೆ, ವಿವಿಧಸವಲತ್ತು ವಿತರಣೆಗೆ ನೀಡಿರುವುದು ಸಣ್ಣ ಸಾಧನೆಯಲ್ಲ.ಇವರ ಸೇವಾ ಕಾರ್ಯ ಇನ್ನಷ್ಟು ನಡೆಯುವಂತಾಗಲಿ ಎಂದು
ಕುದ್ರೋಳಿ ಕ್ಷೇತ್ರದ ಕೋಶಾ„ಕಾರಿ ಪದ್ಮರಾಜ್ ಆರ್ ಹಾರೈಸಿದರು.
ಉಚಿತ ಆಂಬುಲೆನ್ಸ್ ಸೇವೆ,ಕೊರೊನಾ ಸಂದರ್ಭದಲ್ಲಿ ನೆರವು ಹಾಗೂ ಬಡವರ್ಗಕ್ಕೆ ಮನೆ ನಿರ್ಮಾಣ ಕಾರ್ಯಗಳು ನಮ್ಮ ಸಂಘಟನೆಯ ಸದಸ್ಯರ , ದಾನಿಗಳ ,ಹಿತೈಷಿಗಳ ನೆರವಿನಿಂದ ಸಾಧ್ಯ ವಾಗಿದೆ ಎಂದು ಉದಯಪೂಜಾರಿ ಬಳ್ಳಾಲ್‍ಬಾಗ್ ನುಡಿದರು.
ಕುದ್ರೋಳಿ ಶ್ರೀ ಗೋಕರ್ಣ ಕ್ಷೇತ್ರದ ಅಧ್ಯಕ್ಷ ಸಾಯಿರಾಮ್ ಶುಭಹಾರೈಸಿದರು. ಡಾ. ಶಿವಶರಣ್ ಶೆಟ್ಟಿ ಮಂಗಳೂರು, ರಣ್‍ದೀಪ್ ಕಾಂಚನ್,ಸಂಘಟನೆಯ ಅಧ್ಯಕ್ಷ ರಾಕೇಶ್ ಪೂಜಾರಿ, ಪ್ರಮುಖರಾದ ಪ್ರಮೋದ್ ಬಲ್ಲಾಳ್ ಭಾಗ್ ,ರಾಕೇಶ್ ಚಿಲಿಂಬಿ,ಲತೀಶ್ ಪೂಜಾರಿ
ಗೌತಮ್ ಬತ್ತೇರಿ,`Àನ್ ರಾಜ್ ಪೂಜಾರಿ ಚಿಲಿಂಬಿ,ಗಿರೀಶ್ ಬತ್ತೇರಿ,ಲೋಹಿತ್ ಗಟ್ಟಿ, ಜಿತೇಶ್ ಜೈನ್,ದರ್ಶನ್ ಜೈನ್,
ರಾಜೇಶ್ ಉಳ್ಳಾಲ್,ಪ್ರಕಾಶ್ ಪಿಂಟೋ, ರೋಷನ್ ಮೆನೇಜಸ್,ರೇನಿತ್ ರಾಜ್ ,ಸುನಿಲ್ ಶೆಟ್ಟಿ, ದೇವದಾಸ್ ಶೆಟ್ಟಿ, ಮಹೇಶ್ ಪೂಜಾರಿ ಅಶೋಕ್ ನಗರ , ಪ್ರಿಹಾಸ್ ಭಂಡಾರಿ,ಸಹನಾ ಕುಂದರ್,ಪ್ರಜ್ವಲ್ ಶೆಟ್ಟಿ,ಸುರೇಶ್ ಬಲ್ಲಾಳ್ ಭಾಗ್ ,ಲತೀಶ್ ಪೂಜಾರಿ ಚಿಲಿಂಬಿ,ಶರಣ್,ವಾಝಿ ಪದವಿನಂಗಡಿ
ರಾಜೇಶ್ ಬಲ್ಲಾಳ್ ಭಾಗ್ ,ನಾಮ್ ದೇವ್, ಚಂದ್ರಹಾಸ್ ಬತ್ತೇರಿ,ಅಶ್ವಿತ್ ರಾಜ್ ಚಿಲಿಂಬಿ,ಗಣೇಶ್ ಚಿಲಿಂಬಿ,ಸುನಿಲ್ ಚೆಟ್ಟಿಯಾರ್,ರಾಜೇಶ್ ಶೆಟ್ಟಿ ಬಳ್ಳಾಲ್ ಭಾಗ್ ಮತ್ತಿತರರು ಉಪಸ್ಥಿತರಿದ್ದರು.ಕಿಡ್ನಿ ವೈಫಲ್ಯ, ಕ್ಯಾನ್ಸರ್ ವೈದ್ಯಕೀಯ ನೆರವಿಗೆ ಒಟ್ಟು 1.50 ಲಕ್ಷ ರೂ ನೆರವು ವಿತರಣೆ ಮಾಡಲಾಯಿತು.

ADVRTISEMENT

Leave a Reply

Your email address will not be published. Required fields are marked *