Subscriber Content

Add content here that will only be visible to your subscribers.

ಮೂಡುಬಿದಿರೆ ಟೌನ್‌ ಜುಮ್ಮಾ ಮಸೀದಿಯಲ್ಲಿ ಅಬೂಬಕ್ಕರ್ ಹಾಜಿ ಅನುಸ್ಮರಣೆ

ಅಬೂಬಕ್ಕ‌ರ್ ಮುಸ್ಲಿಯಾರ್ ಅವರ ಅನುಸ್ಮರಣೆ, ಕುರ್ ಆನ್, ತಹೀಲ್ ಸಮರ್ಪಣೆ ಕಾರ್ಯಕ್ರಮವು ಮೂಡುಬಿದಿರೆ ಬದ್ರಿಯಾ ಟೌನ್ ಜುಮ್ಮಾ ಮಸೀದಿಯಲ್ಲಿ ಶುಕ್ರವಾರ ಜುಮ್ಮಾ ನಮಾಝ್ ಬಳಿಕ ನಡೆಯಿತು.

ಮಸೀದಿಯ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ದಾರಿಮಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಬೂಬಕ್ಕರ್ ಹಾಜಿ ಅವರು ಈ ಮಸೀದಿಯಲ್ಲಿ ಸುಮಾರು ಎರಡು ದಶಕಗಳ ಕಾಲ ಖತೀಬರಾಗಿ,ಬಳಿಕ ಸುತ್ತಮುತ್ತಲ ಮಸೀದಿಗಳ ಖಾಝಿಯಾಗಿ ಸಲ್ಲಿಸಿದ ದೀನೀ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲಾಯಿತು.

ಮಸೀದಿ ಕಮಿಟಿಯ ಅಧ್ಯಕ್ಷರಾದ ಅಬ್ದುರ್ರಹ್ಮಾನ್ (ಅಬ್ಬಾಕ), ಉಪಾಧ್ಯಕ್ಷ ಖಾದರ್ ಜ್ಯೋತಿನಗರ, ಕೋಶಾಧಿಕಾರಿ ಎಚ್.ಎಮ್. ಅಬ್ದುಲ್ ರಝಾಕ್, ಕಾರ್ಯದರ್ಶಿ ಮುಹಮ್ಮದ್ ನದೀಮ್, ತೋಡಾರು ಮಸೀದಿಯ ಖತೀಬರಾದ ಮೂಸಾ ದಾರಿಮಿ,ಪಡ್ಡಂದಡ್ಕ ಮಸೀದಿಯ ಖತೀಬರಾದ ಅಶ್ರಫ್‌ ಫೈಝಿ ಅರ್ಕಾನ, ಲಾಡಿ ಮಸೀದಿಯ ಖತೀಬರಾದ ಮುಹಮ್ಮದ್ ಫಾಯಿಝ್ ಫೈಝಿ, ವಾಲ್ಪಾಡಿ ಮಸೀದಿಯ ಖತೀಬರಾದ ಅಬ್ಬಾಸ್ ಫೈಝಿ ದಿಡುಪೆ, ಹಂಡೇಲ್ ಮಸೀದಿಯ ಆಡಳಿತ ಕಮಿಟಿ ಅಧ್ಯಕ್ಷರಾದ ಹೆಚ್.ಎಮ್.ಖಾದ‌ರ್ ಹಾಜಿ,ಸ್ಥಳೀಯ ಜಮಾತ್ ಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಾಲಿಕ್ ಅಝೀಝ್,ಅಬ್ದುಸ್ಸಲಾಮ್ ತೋಡಾರ್
ಎಂ.ಜಿ.ಮುಹಮ್ಮದ್ ತೋಡಾರ್, ಡಿ.ಎ.ಉಸ್ಮಾನ್ ತೋಡಾರ್, ಅಶ್ರಫ್ ಮರೋಡಿ,ಇಸ್ಮಾಯಿಲ್ ಕೆ.ಪೆರಿಂಜೆ, ಪತ್ರಕರ್ತ ಹೆಚ್. ಮುಹಮ್ಮದ್ ವೇಣೂರು,ಉಬೈದುಲ್ಲಾ ಶಿರ್ತಾಡಿ, ಎಮ್.ಎಚ್‌.ಶರೀಫ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ADVRTISEMENT