ಅಚ್ಚರಕಟ್ಟೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

ಮೂಡುಬಿದಿರೆ: ಸ.ಹಿ.ಪ್ರಾ ಶಾಲೆ ಅಚ್ಚರಕಟ್ಟೆಯ ವಿದ್ಯಾರ್ಥಿಗಳಿಗೆ ಉಚಿತ ಬರವಣಿಗೆ  ಪುಸ್ತಕ ವಿತರಣಾ ಕಾರ್ಯಕ್ರಮ ಶನಿವಾರ ನಡೆಯಿತು.

ಶಾಲಾ‌ ಸ್ಥಾಪಕ ಅಧ್ಯಕ್ಷ  ಶ್ರೀ ದಯಾನಂದ ಪೈ, ಶಾಲಾಭಿಮಾನಿ  ತಿಮ್ಮಪ್ಪ ಕೋಟ್ಯಾನ್ ,ಹಳೆ  ವಿದ್ಯಾರ್ಥಿ ನಿತೇಶ್, ಎಸ್ ಡಿಎಂಸಿಯ ಮಾಜಿ ಅಧ್ಯಕ್ಷ   ಚೆಲುವಯ್ಯ ಪೂಜಾರಿ, ಕುಂಭಕಂಠಿಣಿ ಭಜನಾ ಮಂಡಳಿಯ ಅಧ್ಯಕ್ಷ  ಪ್ರವೀಣ್ ಕೋಟ್ಯಾನ್, ಶಾಲಾಭಿಮಾನಿ ಹರೀಶ್ ಹೆಗ್ಡೆ, ಶಾಲಾ ಪೋಷಕರಾದ  ಗಣೇಶ್ ಇವರು  ಶಾಲಾ ಮಕ್ಕಳಿಗೆ  ಬರೆಯುವ ಪುಸ್ತಕವನ್ನು ನೀಡಲು ಸಹಕರಿಸಿದ್ದರು. 

ಎಸ್ ಡಿಎಂಸಿಯ  ಅಧ್ಯಕ್ಷ ಪ್ರಭಾಕರ್, ವಾರ್ಡ್ ಸದಸ್ಯ  ಸತೀಶ್ ಕರ್ಕೇರ,ಶಾಲಾ ಮುಖ್ಯ ಶಿಕ್ಷಕರು, ಸಿಬಂದಿ ವರ್ಗ ಮತ್ತು ದಾನಿಗಳು ಈ ಸಂದರ್ಭದಲ್ಲಿ   ಭಾಗವಹಿಸಿದರು.

ADVRTISEMENT