ಕಂಡ ಕಂಡಲ್ಲಿ ವಾಹನ ನಿಲ್ಲಿಸಿದ್ರೆ ಹುಷಾರ್‌ ..! ಮೂಡಬಿದ್ರಿಯಲ್ಲಿ ಬೀಳುತ್ತೆ ಪೊಲೀಸರ ಲಾಕ್‌

ಮೂಡಬಿದಿರೆ : ಇನ್ಮುಂದೆ ಕಂಡ ಕಂಡಲ್ಲಿ ತಮ್ಮ ವಾಹನಗಳನ್ನು ಸವಾರರು ನಿಲ್ಲಿಸುವಂತಿಲ್ಲ. ಒಂದೊಮ್ಮೆ ನೋ ಪಾರ್ಕಿಂಗ್‌ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿದ್ರೆ ಪೊಲೀಸರು ವಾಹನಗಳನ್ನು ಲಾಕ್‌ ಮಾಡುವ ಮೂಲ ಬಿಸಿ ಮುಟ್ಟಿಸಲು ಮೂಡಬಿದಿರೆ ಪೊಲೀಸರು ಮುಂದಾಗಿದ್ದಾರೆ. ಇಂದು ಹಲವು ವಾಹನಗಳಿಗೆ ಪೊಲೀಸರ ಲಾಕ್‌ ಬಿದ್ದಿದೆ.

ಮೂಡಬಿದಿರೆ ನಗರದಲ್ಲಿ ವಾಹನ ಸವಾರರು ತಮ್ಮ ವಾಹನಗಳನ್ನು ಸಿಕ್ಕ ಸಿಕ್ಕ ಸ್ಥಳದಲ್ಲಿ ನಿಲ್ಲಿಸುತ್ತಿದ್ದರು. ಇದರಿಂದಾಗಿ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಡಕಾಗುತ್ತಿತ್ತು. ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ಖಡಕ್‌ ಪೊಲೀಸ್‌ ಅಧಿಕಾರಿ ಎಂದೇ ಖ್ಯಾತಿ ಪಡೆದಿರುವ ಮೂಡಬಿದಿರೆಯ ವೃತ್ತ ನಿರೀಕ್ಷರಾದ ಸಂದೇಶ್‌ ಅವರೇ ಖುದ್ದು ವಾಹನಗಳಿಗೆ ಲಾಕ್‌ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ಹಳೆ ಪೊಲೀಸ್‌ ಠಾಣೆ ಸೇರಿದಂತೆ ಹಲವು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸರು ಈಗಾಗಲೇ ನೋ ಪಾರ್ಕಿಂಗ್‌ ಬೋರ್ಡ್‌ ಅಳವಡಿಸಿದ್ದರೂ ಕೂಡ ವಾಹನ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿದ್ದರು. ಇದನ್ನು ಅರಿತು ಕಾರ್ಯಾಚರಣೆ ನಡೆಸಲಾಗಿದ್ದು, ಮುಂದೆ ನೋ ಪಾರ್ಕಿಂಗ್‌ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿದ್ರೆ ಲಾಕ್‌ ಮಾಡುವುದಾಗಿ ವೃತ್ತ ನಿರೀಕ್ಷಕರಾದ ಸಂದೇಶ್‌ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.

ಚುನಾವಣೆಯ ಹಿನ್ನೆಲೆಯಲ್ಲಿ ಸಿಪಿಐ ಸಂದೇಶ್‌ ಅವರು ಬೇರೆ ಕಡೆ ವರ್ಗಾವಣೆ ಆಗಿದ್ದರು. ಆದ್ರೀಗ ಮತ್ತೆ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ನಗರವನ್ನು ಟ್ರಾಫಿಕ್‌ ಮುಕ್ತಗೊಳಿಸಲು ಪಣತೊಟ್ಟಿದ್ದಾರೆ. ಸಂದೇಶ್‌ ಅವರು ಅಪರಾಧ ಪ್ರಕರಣಗಳಿಗೆ ನಿಯಂತ್ರಣ ಹೇರುವ ಜೊತೆಗೆ ಸಂಚಾರ ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಮಹತ್ವದ ಕಾರ್ಯ ನಡೆಸುತ್ತಿದ್ದಾರೆ.

ಪೊಲೀಸರ ಕಾರ್ಯಕ್ಕೆ ಇದೀಗ ಮೂಡಬಿದಿರೆಯಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ಮುಂದೆ ಮೂಡಬಿದಿರೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸೋದು, ಕಣ್ಣು ಕುಕ್ಕುವ ಹೆಡ್‌ಲೈಟ್‌ ಅಳವಡಿಕೆ ಮಾಡುವವರ ಮೇಲೂ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನಿಲ್ಲಿಸಿದ್ದಾರೆ.

ADVRTISEMENT