ಕರಾವಳಿ ಕೇಸರಿ ಸೇವಾ ಟ್ರಸ್ಟ್ (ರಿ), ಕರಾವಳಿ ಕೇಸರಿ ಮಹಿಳಾ ಘಟಕ (ರಿ), ದರೆಗುಡ್ಡೆ ಇದರ ವತಿಯಿಂದ ದರೆಗುಡ್ಡೆ ಪ್ರೌಢಶಾಲೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ

ಕರಾವಳಿ ಕೇಸರಿ ಸೇವಾ ಟ್ರಸ್ಟ್ (ರಿ), ಕರಾವಳಿ ಕೇಸರಿ ಮಹಿಳಾ ಘಟಕ (ರಿ), ದರೆಗುಡ್ಡೆ ಇದರ ವತಿಯಿಂದ ದರೆಗುಡ್ಡೆ ಪ್ರೌಢಶಾಲೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಮೂಡಬಿದ್ರೆ ಶಾಸಕ ಉಮನಾಥ್ ಕೋಟ್ಯಾನ್ ಅವರು ತನ್ನ ಶಾಸಕ ಅವಧಿಯಲ್ಲಿ ಸರಕಾರಿ ಶಾಲಾ ಮಕ್ಕಳಿಗಾಗಿ ನೀಡಿರುವಂತಹ ಅದೆಷ್ಟೋ ಕೊಡುಗೆಗಳು ಹಾಗೂ ಸರಕಾರಿ ಶಾಲೆ ಮಾಡಿರುವಂತಹ ಸಾಧನೆಗಳು ಇಡೀ ಕ್ಷೇತ್ರಕ್ಕೆ ಹೆಸರು ತರುವಂತದ್ದು ಎಂದು ಮಕ್ಕಳನ್ನು ಅಭಿನಂದಿಸಿದರು, ಕರಾವಳಿ ಕೇಸರಿ ಸೇವಾ ಟ್ರಸ್ಟ್ ಸಂಘಟನೆಯ ಹಲವಾರು ವರ್ಷಗಳಿಂದ ಮಕ್ಕಳಿಗೆ ಪುಸ್ತಕ ನೀಡುತ್ತಿರುವುದು ಮತ್ತು ಅನಾರೋಗ್ಯದಿಂದ ಇರುವವರಿಗೆ ಸಹಾಯಧನವನ್ನು ನೀಡುತ್ತಿರುವುದು ಸಮಾಜ ಮೆಚ್ಚುವಂತ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಎಂದು ಸಂಘಟನೆಯ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳಿಗೆ ವಿದ್ಯೆಯ ಜೊತೆಗೆ ನಮ್ಮ ಧರ್ಮದ ಸಂಸ್ಕೃತಿಗಳನ್ನು ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರ ಇರಿಸುವಂತ ಪ್ರಯತ್ನ ಆಗಬೇಕು ಎಂದು ಸಮಾಜ ಸೇವಕಿ ಶ್ರೀಮತಿ ರಮಿತಾ ಶೈಲೇಂದ್ರ ಅವರು ತಿಳಿಸಿದರು. ಶಾಲೆಯ ಮುಖ್ಯೋಪಾಧ್ಯಾಯರು ಕರುಣಾಕರ ದೇವಾಡಿಗ ಸ್ವಾಗತಿಸಿದರು ಸಹ ಶಿಕ್ಷಕರಾದ ಅರುಣ್ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಕರಾವಳಿ ಕೇಸರಿ ಸೇವಾ ಟ್ರಸ್ಟ್ ರಿ. ಬೆದ್ರ ಸ್ಥಾಪಕ ಅಧ್ಯಕ್ಷ ಸಮಿತ್ ರಾಜ್ ದರೆಗುಡ್ಡೆ ಪಂಚಾಯತ್ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಬೇಲೊಟ್ಟು, ಪಂಚಾಯತ್ ಉಪಾಧ್ಯಕ್ಷರಾದ ನಳಿನಿ ಹರೀಶ್ ಪಂಚಾಯತ್ ಸದಸ್ಯರಾದ ಪ್ರಸಾದ್ ಬಿ ಪೂಜಾರಿ ಮಹಿಳಾ ಘಟಕದ ಅಧ್ಯಕ್ಷ ಬೇಬಿ ಚಿದಾನಂದ, ಪಂಚಾಯತ್ ಸದಸ್ಯ ಶಶಿಕಲಾ ಉಪಸ್ಥಿತರಿದ್ದರು.

ADVRTISEMENT

Leave a Reply

Your email address will not be published. Required fields are marked *