ಕಾರಿನಿಂದ ಕಳವು ಪ್ರಕರಣ: ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ

ಶಿರ್ತಾಡಿ ಪೇಟೆಯ ಬಸ್ ನಿಲ್ದಾಣದ ಆವರಣದಲ್ಲಿ ಮೇ. 31ರಂದು ಮಧ್ಯಾಹ್ನ ಒಂದುವರೆ ಗಂಟೆಗೆ ವ್ಯಕ್ತಿಯೋರ್ವರ ಕಾರಿನಿಂದ ಬೃಹತ್ ಮೊತ್ತದ ಹಣವನ್ನು ಎಗರಿಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ತಮ ಕೈಗೊಳ್ಳುವಂತೆ ಒತ್ತಾಯಿಸಿ ಶಿರ್ತಾಡಿ ಗ್ರಾಮ ಪಂಚಾಯತ್ ಆಡಳಿತ ವತಿಯಿಂದ ಮೂಡುಬಿದಿರೆ ಪೊಲೀಸ್ ನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಶಿರ್ತಾಡಿ ಪಂಚಾಯತ್ ಅಧ್ಯಕ್ಷೆ ಆಗ್ನೇಶ್ ಡಿಸೋಜಾ, ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್, ಸದಸ್ಯ ಎಸ್. ಪ್ರವೀಣ್ ಕುಮಾರ್ ಹಾಗೂ ಗ್ರಾಮಸ್ಥ ನವೀನ್ ಸಾಲ್ಯಾನ್‌ರವರು ಪೊಲೀಸ್ ನಿರೀಕ್ಷಕರಿಗೆ ಮನವಿ ಸಲ್ಲಿಸಿ ಅಪರಾಧ ಪ್ರಕರಣಗಳು ನಡೆದಾಗ ತುರ್ತು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಗ್ರಾಮಾಂತರ ಪ್ರದೇಶಗಳಾದ ಶಿರ್ತಾಡಿ, ವಾಲ್ಪಾಡಿ, ಮಾಂಟ್ರಾಡಿ, ಪಡುಕೊಣಾಜೆ, ಮೂಡುಕೊಣಾಜೆ, ಮುಂತಾದ ಪ್ರದೇಶಗಳಲ್ಲಿ ಮಳೆಗಾಲದ ಮುನ್ಸೂಚನೆ ದೊರೆಯುವ ಸಂದರ್ಭಗಳಲ್ಲಿ ಕಳ್ಳತನ, ಹಣ ಲಪಾಟಾಯಿಸುವುದು ಮುಂತಾದ ಸಣ್ಣ ಪುಟ್ಟ ಅಪರಾಧ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿರುವುದರ ಬಗ್ಗೆ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಆಸುಪಾಸುಗಳಲ್ಲಿ ಸಂಚಾರ ಕೈಗೊಂಡು ಕಾನೂನು ಕ್ರಮದ ಎಚ್ಚರಿಕೆ ನೀಡುವಂತೆ ವಿನಂತಿಸಲಾಯಿತು.

ADVRTISEMENT

Leave a Reply

Your email address will not be published. Required fields are marked *