ಕೇಮಾರು : ಜುಲೈ 28 ರಂದು ಜರಗಲಿರುವ ಕೆಸರುಡೊಂಜಿ ದಿನಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಕೇಮಾರು : ಜುಲೈ 28ರಂದು ಜರಗಲಿರುವ ಕೆಸರುಡೊಂಜಿ ದಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ.

ಯುವ ಉತ್ಸಾಹಿ ಬಳಗ (ರಿ.) ನೇತೃತ್ವದಲ್ಲಿ ಯುವಸಂಗಮ ಕಾಂತಾವರ (ರಿ.) ಇದರ ಸಹಭಾಗಿತ್ವದಲ್ಲಿ 28.7.2024ನೇ ಅದಿತ್ಯವಾರದಂದು ಕೇಮಾರು ಹಕ್ಕೇರಿ ಬಾಕಿಮಾರು ಗದ್ದೆಯಲ್ಲಿ ಜರಗುವ
ಕೆಸರುಡೊಂಜಿ ದಿನ 2024 ಇದರ ಆಮಂತ್ರಣ ಪತ್ರಿಕೆಯನ್ನು ಜೂ 30ರಂದು ಶ್ರೀ ಕ್ಷೇತ್ರ ಕೇಮಾರುನಲ್ಲಿ ಶ್ರೀ ಸಾಂದಿಪನಿ ಸಾಧನಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ದಿವ್ಯಹಸ್ತದಿಂದ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಯುವ ಉತ್ಸಾಹಿ ಬಳಗ (ರಿ.) ಕೇಮಾರು ಇದರ ಅಧ್ಯಕ್ಷರಾದ ಚಂದ್ರಹಾಸ ಜೈನ್ ಹಕ್ಕೇರಿ, ಉಪಾಧ್ಯಕ್ಷರಾದ ಜಗದೀಶ್ ಅಮೀನ್ ಕೇಮಾರು, ಸಂಚಾಲಕರಾದ ಜೀವಂದರ್ ಶೆಟ್ಟಿಗಾರ್, ಯುವಸಂಗಮ ಕಾಂತಾವರ (ರಿ.) ಇದರ ಕೋಶಾಧಿಕಾರಿ ಗೌತಮ್ ಹಾಗೂ ಯುವ ಉತ್ಸಾಹಿ ಬಳಗ (ರಿ.) ಕೇಮಾರು ಹಾಗೂ ಯುವಸಂಗಮ ಕಾಂತಾವರ (ರಿ.) ತಂಡದ ಸದಸ್ಯರು ಉಪಸ್ಥಿತರಿದ್ದರು.

ADVRTISEMENT