ಜನನಿಬಿಡ ಹಾಗೂ ವಾಹನ ನಿಲುಗಡೆಗಳಿಗೆ ಸ್ಥಳವಕಾಶ ಕಡಿಮೆ ಇದ್ದ ಪ್ರದೇಶದಲ್ಲಿದ್ದ ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ಕಚೇರಿಯನ್ನು ಕಾರ್ಯಕರ್ತರಿಗೆ ಅನುಕೂಲ ವಾಗುವಂತೆ ಕೋರ್ಟ್ ರಸ್ತೆಯಲ್ಲಿರುವ ಸ್ವರಾಜ್ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಈ ಕಚೇರಿ ಉದ್ಘಾಟನೆಯು ಜುಲೈ 10ರಂದು ಬೆಳಿಗ್ಗೆ 11 ಗಂಟೆಗೆ ನೆರವೇರಲಿದ್ದು ,ಇದೇ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಮಿಥುನ್ ಎಂ ರೈ ಯವರ “ಸಹಾಯ” ಎಂಬ ಕಚೇರಿಯು ಕೂಡ
ಕಾರ್ಯರಂಭಗೊಳ್ಳಲಿದೆ.
ತದನಂತರ ಮೂಡಬಿದ್ರೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ಹರ್ಷವರ್ಧನ್ ಪಡಿವಾಳ ಮತ್ತು ಇನ್ನಿತರ ನಿರ್ದೇಶಕರ ಅಭಿನಂದನಾ ಕಾರ್ಯಕ್ರಮವು ಕೂಡ ಸಮಾಜ ಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶ್ರೀ ಕೆ ಅಭಯ್ ಚಂದ್ರ ಜೈನ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ
ಶ್ರೀ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ , ಶ್ರೀ ಮಿಥುನ್ ಎಂ ರೈ ,ವಿಧಾನ ಪರಿಷತ್ ಶಾಸಕರುಗಳಾದ
ಶ್ರೀ ಮಂಜುನಾಥ ಭಂಡಾರಿ ,
ಶ್ರೀ ಐವನ್ ಡಿಸೋಜ ಮೊದಲಾದ ರಾಜ್ಯ ಮತ್ತು ಜಿಲ್ಲಾಮಟ್ಟದ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು
ಶ್ರೀ ಮಿಥುನ್ ಎಂ ರೈ ಅವರ ಕಚೇರಿ ಪ್ರಕಟಣೆ ತಿಳಿಸಿದೆ.