ಜು 22 ರಿಂದ ಪ್ರತಿದಿನ ಮಂಗಳೂರು – ಅಬುಧಾಬಿ ನಡುವೆ ಏರ್ ಇಂಡಿಯಾ ವಿಮಾನ ಹಾರಾಟ

ಮಂಗಳೂರು, ಜೂ.11: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ವಾರಕ್ಕೆ 4 ದಿನಗಳ ಕಾಲ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ (ಐಎಕ್ಸ್) ವಿಮಾನಗಳು ಜು.22ರಿಂದ ಪ್ರತಿದಿನ ಮಂಗಳೂರಿನಿಂದ ಅಬುಧಾಬಿಗೆ ಹಾರಾಟ ನಡೆಸಲಿದೆ.

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಮಂಗಳವಾರ, ಗುರುವಾರ, ಶನಿವಾರ ಮತ್ತು ರವಿವಾರ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಹಾರಾಟ ನಡೆಸುತ್ತಿತ್ತು. ಇದೀಗ ಮೂರು ವಿಮಾನಗಳು ಹೆಚ್ಚುವರಿ ಸೇರ್ಪಡೆಯೊಂದಿಗೆ ಪ್ರತಿ ದಿನ ಹಾರಾಟ ನಡೆಸಲಿದೆ ಎಂದು ಪ್ರಕಟನೆ ತಿಳಿಸಿದೆ.

ADVRTISEMENT