ಮೂಡುಬಿದಿರೆ: ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರ ’72’ನೇ ಹುಟ್ಟುಹಬ್ಬದ ಸಂದರ್ಭ, ಕಾರ್ಕಳ ಗಣಿತನಗರದ ‘ಜ್ಞಾನಸುಧಾ’ ಆವರಣದಲ್ಲಿ ಶುಕ್ರವಾರ ಸಂಜೆ ಡಾ| ಆಳ್ವರ ಕಾರ್ಕಳದ ಅಭಿಮಾನಿಗಳು ಸಂಯೋಜಿಸಿದ ‘ಸವ್ಯಸಾಚಿ ಸಂಭ್ರಮ ಕಾರ್ಯಕ್ರಮದಲ್ಲಿ 72ರ ಆಳ್ವರ ಕುರಿತಾದ, 72 ಮಂದಿಯ ಲೇಖನಗಳಿರುವ 3೧೪ ಪುಟಗಳ ‘ಸವ್ಯಸಾಚಿ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ। ಡಿ. ವೀರೇಂದ್ರ ಹೆಗ್ಗಡೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಆರೋಗ್ಯ, ಶಿಕ್ಷಣ, ಕಲೆ, ಸಾಹಿತ್ಯ, ಸಂಸ್ಕೃತಿ ಕ್ರೀಡೆ ಎಲ್ಲದರಲ್ಲೂ ತೊಡಗಿಸಿಕೊಂಡು ಆನುವಮ ಸಾಧಕನಾಗಿ ನಮ್ಮ ಜತೆಗಿರುವ ಮೂಡುಬಿದಿರೆ ಡಾ| ಮಿಜಾರುಗುತ್ತು ಮೋಹನ ಆಳ್ವರು ರಾಷ್ಟ್ರೀಯತೆ, ಮನುಷ್ಯ ಪ್ರೀತಿಯಲ್ಲಿ ನಿಜಕ್ಕೂ ‘ಸವ್ಯಸಾಚಿ” ಬಿರುದಿಗೆ ಪಾತ್ರರಾದವರು. ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನಾಗಬಹುದು, ಏನನ್ನು ಸಾಧಿಸಬಹುದು ಎಂಬುದಕ್ಕೆ ಸಾಕ್ಷಿ ಎಂದರು.

ಮೋಹನ ಆಳ್ವ ಅಲ್ಲ. ಅವರು ಮಹಾನ್ ಆಳ್ವ. ಅವರು ಸವ್ಯಸಾಚಿ. ಇನ್ನು ಮುಂದೆ ನಾವು ಅವರನ್ನು ಸವ್ಯಸಾಚಿ ಡಾ. ಮೋಹನ ಆಳ್ವರೆಂದೇ ಕರೆಯುತ್ತೇವೆ ಎಂದರು.
ಮೋಹನ ಆಳ್ವ ಆಧ್ಯಾತ್ಮಿಕ ಮನೋಭೂಮಿಕೆ ಹೊಂದಿರುವ ಅಪರೂಪದ ಸಾಧಕ. ಒಬ್ಬ ಮನುಷ್ಯನಾಗಿ ಅವರು ನಾಡು ನುಡಿಗೆ ಮಾಡಿದ ಸೇವೆಯನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ ಎಂದು ಹೆಗ್ಗಡೆಯವರು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಎನ್. ವಿನಯ ಹೆಗ್ಡೆ ಅವರು, ಶಿಕ್ಷಣ, ಸಮಾಜ, ಸಂಸ್ಕೃತಿ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಮೋಹನ ಆಳ್ವ ಮಾಡಿರುವ ಸಾಧನೆ ಅನನ್ಯ. ಅವರು ಬಹಳ ಶ್ರೇಷ್ಠ ವ್ಯಕ್ತಿ ಎಂಬುದನ್ನು ಮುಂದಿನ ಜನಾಂಗ ಖಂಡಿತ ನೆನಪಿಟ್ಟುಕೊಳ್ಳುತ್ತದೆ ಎಂದರು.

Leave a Reply