ಮೂಡಬಿದರೆ : ಪೊಲೀಸ್ ಅಧಿಕಾರಿಯಾದವರು ದಕ್ಷತೆ, ಪ್ರಮಾಣಿಕತೆಯಿಂದ ಕೆಲಸ ಮಾಡಿದ್ರೆ ಎಂತಹಾ ಗೌರವ ಸಿಗುತ್ತೆ ಅನ್ನೋದಕ್ಕೆ ಮೂಡಬಿದಿರೆಯ ಈ ಪೊಲೀಸ್ ಅಧಿಕಾರಿಯೇ ಸಾಕ್ಷಿ. ಪೊಲೀಸ್ ಅಧಿಕಾರಿಯಾಗಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿದ್ದ ದಿವಾಕರ್ ರೈ ಅವರಿಗೆ ಸಹೋದ್ಯೋಗಿಗಳು ಪುಷ್ಪಾರ್ಚನೆಯ ಗೌರವ ಸಲ್ಲಿಸಿದ್ದಾರೆ.

ದಿವಾಕರ ರೈ ಅವರು ಸೇವೆಯಿಂದ ಇಂದು ನಿವೃತ್ತರಾಗಿದ್ದರು. ಮೂಡಬಿದಿರೆಯ ಪೊಲೀಸ್ ಠಾಣೆಯಿಂದ ಅವರು ಸೇವೆಯನ್ನು ಮುಗಿಸಿ ಮನೆಗೆ ತೆರಳುವ ವೇಳೆಯಲ್ಲಿ ಅವರು ಠಾಣೆಯಿಂದ ಪೊಲೀಸ್ ಜೀಪ್ ಏರುವ ವರೆಗೂ ಮೂಡಬಿದಿರೆಯ ವೃತ್ತ ನಿರೀಕ್ಷಕರಾದ ಸಂದೇಶ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪುಷ್ಪಾರ್ಚೆಯನ್ನು ಮಾಡಿದ್ರು.

ಪೊಲೀಸ್ ಜೀಪ್‌ನಲ್ಲೇ ಪೊಲೀಸ್ ಅಧಿಕಾರಿಯಾಗಿಯೇ ದಿವಾಕರ ರೈ ಮನೆಗೆ ತೆರಳಿದ್ದಾರೆ. ಸಹೋದ್ಯೋಗಿಗಳು ನೀಡಿದ ಗೌರವಕ್ಕೆ ದಿವಾಕರ ರೈ ಅವರು ಆನಂದ ಬಾಷ್ಪ ಸುರಿಸಿದ್ದಾರೆ. ಸದಾ ಒಂದೊಲ್ಲೊಂದು ಅಪರಾಧ ಪ್ರಕರಣಗಳಿಂದಲೇ ಬ್ಯುಸಿಯಾಗಿರುತ್ತಿದ್ದ ಮೂಡಬಿದಿರೆಯ ಪೊಲೀಸ್ ಠಾಣೆ ಇಂದು ವಿನೂತನ ಸಂದರ್ಭಕ್ಕೆ ಸಾಕ್ಷಿಯಾಗಿತ್ತು.
