ಮೂಡುಬಿದಿರೆ ಯುವವಾಹಿನಿ ಅರಿವು- 2024 ಕಾರ್ಯಕ್ರಮ

ಮೂಡುಬಿದಿರೆ, ಜೂ.೨೩: ಕರ್ನಾಟಕ‌ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ರಿ. ಮೂಡುಬಿದಿರೆ ಘಟಕದ ವತಿಯಿಂದ ಶ್ರೀ ನಾರಾಯಣ ಗುರುಗಳ ಜೀವನ-ಸಂದೇಶ ಗೋಷ್ಠಿ: ಅರಿವು ೨೦೨೪, ಸಮ್ಮಾನ, ಯುವಸಿರಿ ಪುರಸ್ಕಾರ ಪ್ರದಾನ ಕಾರ್ಯಕ್ರಮ ಯುವವಾಹಿನಿ ಅಧ್ಯಕ್ಷ ಶಂಕರ ಎ. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಬ್ರಹ್ಮಶ್ರೀ ಗುರುನಾರಾಯಣಸ್ವಾಮಿ ಸೇವಾ ಸಂಘದ ಸಭಾಂಗಣದಲ್ಲಿ ರವಿವಾರ ಜರಗಿತು.

ಭಾನುಮತಿ ಶೀನಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ಮುಖ್ಯ ಆತಿಥಿ, ರಾಜ್ಯ ಹೈಕೋರ್ಟ್ ನಿರ್ದೇಶಿತ ಹಿರಿಯ ನ್ಯಾಯವಾದಿ ಇರುವೈಲು ತಾರಾನಾಥ ಪೂಜಾರಿ ಅವರು ಜೀವನ ಮೌಲ್ಯ, ಶಿಸ್ತುಬದ್ಧ ಜೀವನದಿಂದ ಸಾಧನೆ ಮಾಡಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಚಿಂತಕ, ಶಿಕ್ಷಕ ಅರವಿಂದ ಚೊಕ್ಕಾಡಿ ಗುರು ಸಂದೇಶ ನೀಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಮಾರ್ಗದರ್ಶನವಿತ್ತರು.
ಯುವಸಿರಿ:
೨೦೨೩-೨೪ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲಇ ಶೇ.೯೦ಕ್ಕಿಂತ ಅಧಿಕ ಅಂಕ ಗಳಿಸಿದ ೩೦ ಮಂದಿ ಬಿಲ್ಲವ ವಿದ್ಯಾರ್ಥಿಗಳಿಗೆ ನಗದು ಸಹಿತ ‘ಯುವಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮ್ಮಾನ: ಎಸ್‌ಎಸ್‌ಎಲ್‌ಸಿಯಲ್ಲಿ ಮೂಡುಬಿದಿರೆ ವ್ಯಾಪ್ತಿಯಲ್ಲಿ ಪ್ರಥಮ ಸ್ಥಾನ ಪಡೆದ ಮಾನ್ಯ ಎನ್. ಪೂಜಾರಿ, ಪಿಯುಸಿಯಲ್ಲಿ ಮೂರು ವಿಭಾಗಗಲಲ್ಲಿ ಅತ್ಯಧಿಕ ಅಂಕ ಪಡೆದ ಮೂವರ ಸಹಿತ ನಾಲ್ಕು ಮಂದಿಯನ್ನು ಸಮ್ಮಾನಿಸಲಾಯಿತು.

ವಿಶುವಲ್ ಆಟ್ಸ್ ð ಪದವಿಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದ ಶ್ರವಣ್ ಪೂಜಾರಿ, ಯುವವಾಹಿನಿ ಮಾಜಿ ಅಧ್ಯಕ್ಷ, ಪ್ರಸ್ತುತ ಕೇಂದ್ರ ಸಮಿತಿ ಪ್ರ, ಕಾರ್ಯದರ್ಶಿಯಾಗಿರುವ ಜಗದೀಶ್ಚಂದ್ರ ಡಿ.ಕೆ., ಬಹುಬಗೆಯಲ್ಲಿ ಸಹಕರಿಸುತ್ತಿರುವ ಸಂತೋಷ್ ಪಣಪಿಲ, ಹರಿಪ್ರಸಾದ್ ಹೊಸಂಗಡಿ, ಶೋಭಾ ಸುರೇಶ್ ಹಾಗೂ ಸ್ವಾಮಿ ಪ್ರಸಾದ್ ಇವರನ್ನು ಅಭಿನಂದಿಸಲಾಯಿತು.
ಸುಮಾರು ೬೦ ಮಂದಿ ವಿದ್ಯಾರ್ಥಿ ವೇತನ ಅರ್ಜಿ ನೋಂದಣಿ ನಡೆಸಲಾಗಿದ್ದು ಅವರವರ ಮನೆಗಲಿಗೇ ತೆರಳಿ ನೆರವು ನೀಡುವುದಾಗಿ ಪ್ರಕಟಿಸಲಾಯಿತು

ಬಿಲ್ಲವ ಸಂಘದ ಅಧ್ಯಕ್ಷ ಸುರೇಶ್ ಕೆ. ಪೂಜಾರಿ, ಅಶೋಕ್ ಬಿ. ಉಪಸ್ಥಿತರಿದ್ದರು. ಯುವ ಸ್ಪಂದನ ಯೊಜನೆಯ ಆಧ್ಯಕ್ಷ ನವಾನಂದ ಸ್ವಾಗತಿಸಿ, ಡಾ. ಯೋಗೀಶ್ ಕೈರೋಡಿ ಮತ್ತು ಪ್ರಭಾಕರ ಚಾಮುಂಡಿಬೆಟ್ಟ ನಿರೂಪಿಸಿದರು. ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ವಂದಿಸಿದರು.

ADVRTISEMENT