ಮೂಡುಬಿದಿರೆ: ರಾಜ್ಯ ಹೆದ್ದಾರಿಯ ಮೇಲೆ ಬಿದ್ದ ಮರ: ತಕ್ಷಣ ತೆರವುಗೊಳಿಸುವ ಕಾರ್ಯದಲ್ಲಿ ಸ್ಥಳೀಯರ ಸಹಾಯ

ಮೂಡುಬಿದಿರೆ : ಬಂಟ್ವಾಳ – ಮೂಡುಬಿದಿರೆ ರಾಜ್ಯ ಹೆದ್ದಾರಿಯ ಮೇಲೆ ನಿನ್ನೆ ತಡರಾತ್ರಿ 11:30ರ ವೇಳೆಗೆ ಪ್ರಾಂತ್ಯ ಗ್ರಾಮದ ಮಿಜಾರ್‌ ಫ್ಯೂಯಲ್ಸ್‌ ಪೆಟ್ರೋಲ್‌ ಪಂಪಿನ ಬಳಿ ಹೆದ್ದಾರಿಗೆ ಅಡ್ಡವಾಗಿ ಮರವೊಂದು ವಿಪರೀತ ಗಾಳಿ-ಮಳೆಗೆ ಧರೆಗೆ ಉರಿಳಿತ್ತು.

ರಾತ್ರಿ ವೇಳೆ ವಾಹನ ಸಂಚಾರ ಕಡಿಮೆ ಇದದ್ದರಿಂದ ಯಾವುದೇ ವಾಹನಗಳಿಗೆ ಹಾನಿಯಾಗಲಿಲ್ಲ. ಮರ ಬಿದ್ದ ಸ್ಥಳದಲ್ಲಿದ್ದ ಬಿರಾವು ಮೂಲದ ಸದಾಶಿವ ಶಟ್ಟಿಯವರು ತಮ್ಮ ಮನೆಗೆ ಧಾವಿಸಿ ಮರ ಕಡಿಯುವ ಮಿಷಿನ್‌ ತಂದು ಧರೆಗೆ ಉರುಳಿದ್ದ ಮರವನ್ನು ತೆರವು ಮಾಡುವಲ್ಲಿ ಸಹಾಯ ಮಾಡಿದರು. ತಕ್ಷಣ ಕರೆಗೆ ಸ್ಪಂದಿಸಿದ ಮೂಡಬಿದಿರೆ ಪೊಲೀಸ್‌ ಸಿಬ್ಬಂದಿಯವರು, ಜನಪ್ರತಿನಿಧಿಗಳು, ಯಶ್ನಿ ಆಸು-ಪಾಸಿನ ಸಾರ್ವಜನಿಕರು, ಲಾಡಿ ಮಸೀದಿ ಬಳಿ ಕಾರ್ಯಕ್ರಮವೊಂದಕ್ಕೆ ಬಂದ ಸ್ವಯಂಸೇವಕರ ಸಹಾಯದಿಂದ ಧರೆಗೆ ಉರುಳಿದ್ದ ಮರವನ್ನು ತೆರವು ಮಾಡುವಲ್ಲಿ ಯಶಸ್ವಿಯಾಯಿತು. ವಿದ್ಯುತ್‌ ಕಂಬದ ಮೇಲೆ ಮರ ಬೀಳದಿದ್ದರಿಂದ ಯಾವುದೇ ಅನಾಹುತಗಳಾಗಲಿಲ್ಲ, ಮೂಡುಬಿದಿರೆ ಮೆಸ್ಕಾಂನ ಸಿಬ್ಬಂದಿ ಲೈನ್‌ ಮ್ಯಾನ್‌ ರಮೇಶ್‌ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದರು.

ADVRTISEMENT