ಮೂಡುಬಿದಿರೆ: ಈ ವರ್ಷದ ಅತ್ಯುತ್ತಮ ಸಾಮಾಜಿಕ ಸೇವೆ, ಸಾಧನೆಯ ಚಟುವಟಿಕೆಗಳಿಗಾಗಿ ಮೂಡುಬಿದಿರೆ ರೋಟರಿ ಕ್ಲಬ್ ರೋಟರಿ ಜಿಲ್ಲೆಯ ಪ್ಲಾಟಿನಂ ಪ್ಲಸ್ ಎವಾರ್ಡ್ ಗೌರವ ಪಡೆದಿದೆ. ಮೈಸೂರಿನ ಐವರಿ ಸಿಟಿ ರೋಟರಿ ಕ್ಲಬ್ ಆತಿಥ್ಯದಲ್ಲಿ ಜರಗಿದ ಜೈತ್ರ ಯಾತ್ರಾ 2024 ಅವಾರ್ಡ್ ನೈಟ್ ಸಮಾರಂಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ಹೆಚ್. ಆರ್. ಕೇಶವ್ ಹಿರಿತನದಲ್ಲಿ ಚಿತ್ರ ನಟಿ ಪ್ರಿಯಾಂಕ ಅವರು ಮೂಡುಬಿದಿರೆ ರೋಟರಿ ಅಧ್ಯಕ್ಷ ನಾಗರಾಜ್ ಬಿ. ಕಾರ್ಯದರ್ಶಿ ನಾಗರಾಜ್ ಹೆಗ್ಡೆ ಸಹಿತ ಪದಾಧಿಕಾರಿಗಳ ಬಳಗಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು.
ಟಿಆರ್ ಎಫ್ ಗೆ ದೇಣಿಗೆ ನೀಡುವಲ್ಲಿ ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನ, ರಸ್ತೆ ಸುರಕ್ಷತಾ ಕಾರ್ಯಕ್ರಮಗಳಿಗಾಗಿ ವಿಶೇಷ ಪುರಸ್ಕಾರ ವೂ ಮೂಡುಬಿದಿರೆ ರೋಟರಿ ಕ್ಲಬ್ ಗೆ ನೀಡಲಾಗಿದೆ. ಅಸಿಸ್ಟೆಂಟ್ ಗವರ್ನರ್ ಆಗಿರುವ ಮೂಡುಬಿದಿರೆ ಕ್ಲಬ್ ನ ಡಾ. ರಮೇಶ್ ಅವರನ್ನೂ ಗೌರವಿಸಲಾಯಿತು.
ನಿಕಟಪೂರ್ವ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಉಪಸ್ಥಿತರಿದ್ದರು.