ರೋಟರಿ ಆಂಗ್ಲ ಮಾಧ್ಯಮ ಶಾಲೆ , ಜ್ಯೋತಿ ನಗರ ಮೂಡುಬಿದಿರೆ ಇಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿಮಂಡಲದ ಚುನಾವಣೆ

ರೋಟರಿ ಆಂಗ್ಲ ಮಾಧ್ಯಮ ಶಾಲೆ , ಜ್ಯೋತಿ ನಗರ ಮೂಡುಬಿದಿರೆ ಇಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿಮಂಡಲದ ಚುನಾವಣಾ ಪ್ರಕ್ರಿಯೆಯು ಶಿಸ್ತು ಬದ್ಧವಾಗಿ ಯಶಸ್ವಿಯಾಗಿ ನಡೆಯಿತು. ಮುಖ್ಯ ಚುನಾವಣಾ ಅಧಿಕಾರಿಯಾಗಿ ಶಾಲಾ ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ ಜೈನ್, ಮತಗಟ್ಟೆ ಅಧಿಕಾರಿಗಳಾಗಿ ಡೀಲನ್ , ವಿನಯಾ, ಗಾಯತ್ರಿ , ಸುನೀತಾ ಇವರು ಕಾರ್ಯನಿರ್ವಹಿಸಿದರು. ಪ್ರಾಥಮಿಕ ವಿಭಾಗದಲ್ಲಿ ನಾಯಕ/ನಾಯಕಿಯ ಸ್ಥಾನಕ್ಕೆ ನಂದನಾ ಪ್ರಭು , ದಿಶಾನ್ ಡಿ ನಾಯ್ಕ್ , ರಿಯಾನ್ ಆಲೆನ್ ಡಿ ಸೋಜಾ , ರಂಜನಾ ಪೈ ಬೈದಬೆಟ್ಟು ಹಾಗೂ ಪ್ರೌಢ ವಿಭಾಗದಲ್ಲಿ ಸತೀಶ್, ಜೆನಿಶಾ, ದೀಕ್ಷಿತಾ , ಸುಧಾಂಶು ಸ್ಪರ್ಧಿಸಿದರು. ಮತದಾನ ಪ್ರಕ್ರಿಯೆಯಲ್ಲಿ ಸಂಯೋಜಕರಾದ ಗಜಾನನ ಮರಾಠೆ , ನವೀನಾ , ರಮ್ಯಾ, ಮೋಹನ್ ಹಾಗೂ ಶಿಕ್ಷಕರಾದ ದೀಪಿಕಾ, ಲೋನಾ, ಲಕ್ಷ್ಮೀ, ನಾರಾಯಣಿ, ಕವಿತಾ, ಸುಕ್ಷಿತಾ, ಜ್ಯೋತಿ, ದೀಕ್ಷಿತ್, ರೇಖಾ ವೆಂಕಟೇಶ, ಸುಧೀರ್, ಗೋಪಾಲಕೃಷ್ಣ ಪಾಲ್ಗೊಂಡರು.

ADVRTISEMENT

Leave a Reply

Your email address will not be published. Required fields are marked *