ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರ (ಮುಡಾ)ದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹರ್ಷವರ್ಧನ ಪಡಿವಾಳ್ ಹಾಗೂ ಸದಸ್ಯರನ್ನು, ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಐವನ್ ಡಿಸೋಜ ಹಾಗೂ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರನ್ನು ಅಭಿನಂದಿಸುವ ಕಾರ್ಯಕ್ರಮವು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಮಾಜ ಮಂದಿರದಲ್ಲಿ ನಡೆಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರ್ಷವರ್ಧನ ಪಡಿವಾಳ್, ಮುಡಾ ಸದಸ್ಯರಾದ ಸತೀಶ್ ಭಂಡಾರಿ ಕರಿಂಜೆ , ಶೇಖರ್ (ಬೊಳ್ಳಿ),

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹಾಗೂ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ,ನಗರ ಅಧ್ಯಕ್ಷ ಪುರಂದರ ದೇವಾಡಿಗ,ಪ್ರಮುಖರಾದ ಚಂದ್ರಹಾಸ ಸನಿಲ್,ಮೋಹನ್ ಕೋಟ್ಯಾನ್, ವಸಂತ ಬೆರ್ನಾರ್ಡ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಹಮ್ಮದ್ ವಸೀರ್ ,ಎಸ್.ಸಿ.ಘಟಕದ ಅಧ್ಯಕ್ಷ ವಿವೇಕ್ ಶಿರ್ತಾಡಿ, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಜೊಸ್ಸಿ ಮಿನೇಜಸ್,ಸುರೇಶ್ ಪ್ರಭು,ಪಿ.ಕೆ.ಥೋಮಸ್, ಕೊರಗಪ್ಪ,ಇಕ್ಬಾಲ್ ಕರೀಮ್,ಮಮತಾ ಆನಂದ್,ಶಕುಂತಲಾ ದೇವಾಡಿಗ,ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುನ್ನ ಕೋರ್ಟ್ ರಸ್ತೆಯಲ್ಲಿ ಬ್ಲಾಕ್ ಕಾಂಗ್ರೆಸ್ ನ ನೂತನ ಕಚೇರಿ, ಮಿಥುನ್ ರೈ ಅವರ ಕಚೇರಿ ‘ಸಹಾಯ’ ,ಮುಡಾ ಕಚೇರಿಯ ಉದ್ಘಾಟನೆ ನಡೆಯಿತು.














