ಏ. 18 ರಿಂದ‌ 26 ರ ವರೆಗೆ ತೋಡಾರು ಉರೂಸ್ ಸಮಾರಂಭ

ಮೂಡುಬಿದಿರೆ: ಬದ್ರಿಯಾ ಸುನ್ನೀ ಜುಮ್ಮಾ ಮಸೀದಿ ,ತೋಡಾರು ಇದರ ವಲಿಯುಲ್ಲಾಹಿ ದರ್ಗಾ ಶರೀಫ್ ನ ಉರೂಸ್ ಸಮಾರಂಭವು ಎಪ್ರಿಲ್ 18 ರಿಂದ 26 ರ ವರೆಗೆ ಒಂಭತ್ತು ದಿನಗಳ ಕಾಲ ನಡೆಯಲಿದೆ ಎಂದು ಉರೂಸ್ ಸಮಿತಿಯ ಅಧ್ಯಕ್ಷರಾದ ಟಿ.ಎಚ್.ಇಸ್ಮಾಯಿಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಒಂಭತ್ತು ದಿನಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಧಾರ್ಮಿಕ ವಿದ್ವಾಂಸರು, ನೇತಾರರು ಹಾಗೂ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಎರಡು ವರ್ಷಕ್ಕೊಮ್ಮೆ ನಡೆಯುತ್ತಾ ಬಂದಿರುವ ತೋಡಾರ್ ಉರೂಸ್ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಸೌಹಾರ್ದ ಕೂಟ ನಡೆಯಲಿದೆ ಎಂದು ಹೇಳಿದರು.
ಮಸೀದಿ ಕಮಿಟಿಯ ಅಧ್ಯಕ್ಷ ಎಂ.ಎ.ಎಸ್.ಆಸಿಫ್ ಇಕ್ಬಾಲ್, ಉರೂಸ್ ಕಮಿಟಿಯ ಉಪಾಧ್ಯಕ್ಷ ಎಮ್.ಎ.ರಝಾಕ್, ಕಾರ್ಯದರ್ಶಿ ಹಿದಾಯತ್ ಹೊಸಮನೆ, ಖಜಾಂಚಿ ಇಬ್ರಾಹಿಂ ಬೂಟ್ ಬಝಾರ್, ಜತೆ ಕಾರ್ಯದರ್ಶಿ ಹಾಶಿರ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ADVRTISEMENT

Leave a Reply

Your email address will not be published. Required fields are marked *