ಮೂಡುಬಿದಿರೆ: ಇಲ್ಲಿನ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನ ಲಾಡಿ ಇದರ ಬ್ರಹ್ಮಕಲಶೋತ್ಸವಕ್ಕೆ ಮೂಡುಬಿದಿರೆ ಪುರಸಭಾ ಸದಸ್ಯ ಇಕ್ಬಾಲ್ ಕರೀಂ ಶುಭಕೋರಿ ಅಳವಡಿಸಿದ ಬ್ಯಾನರ್ ನ್ನು ಕಿಡಿಗೇಡಿಗಳು ಹರಿದು ಹಾಕಿದ್ದು, ಬ್ಯಾನರ್ ಹರಿದ ಕಿಡಿಗೇಡಿಗಳನ್ನು ದೂರು ಬಂದ ಒಂದು ಗಂಟೆಯಲ್ಲಿ ಮೂಡಬಿದ್ರಿ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ಹಾಗೂ ತಂಡ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಜಾರ್ಕಂಡ್ ರಾಜ್ಯದ ಮಹಮ್ಮದ್ ಸಿರಾಜ್ ಅನ್ಸಾರಿ(೨೬) ಹಾಗೂ ಬಿಹಾರ್ ರಾಜ್ಯದ ಮಹಮ್ಮದ್ ಕಾಮ್ಡು ಜಮನ್ ಎಂದು ತಿಳಿದು ಬಂದಿದೆ
ಫ್ಲೆಕ್ಸ್ ಬ್ಯಾನರ್ ನ ಅಹಿತಕರ ಘಟನೆಯ ಕುರಿತು ಇನ್ಸ್ಪೆಕ್ಟರ್ ಸಂದೇಶ್ ಪಿಜಿ ನೇತೃತ್ವದ ಮೂಡಬಿದ್ರಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Leave a Reply