ಆಟೋ ರಿಕ್ಷಾ ಮಾಲಕ ಚಾಲಕರ ಸಂಘದ ಧನಲಕ್ಷ್ಮೀ ಪೂಜೆ ಮತ್ತು ವಾಹನ ಪೂಜೆ

ಮೂಡುಬಿದಿರೆ : ಆಟೋ ರಿಕ್ಷಾ ಮಾಲಕ _ ಚಾಲಕರ ಸಂಘದ ಮೂಡುಬಿದಿರೆ ತಾಲೂಕು ಇದರ ಶ್ರೀ ಧನಲಕ್ಷ್ಮೀ ಪೂಜೆ ಮತ್ತು ವಾಹನ ಪೂಜೆಯು ಸಮಾಜ ಮಂದಿರ ಆಟೋ ಪಾರ್ಕ್ ನಲ್ಲಿ ದೀಪಕ್‌ರಾಜ್ ಕೊಡಂಗಲ್ಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ರಿಕ್ಷಾ ಚಾಲಕರಾದ ಜಯರಾಮ್ ರಾವ್, ರಾಜೇಶ್ ಸುವರ್ಣ, ಅಬ್ದುಲ್ ರಹ್ಮಾನ್ ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಚೌಟರ ಅರಮನೆ ಕುಲದೀಪ ಎಂ, ಅಧ್ಯಕ್ಷರು ಎಮ್.ಸಿ.ಎಸ್ ಬ್ಯಾಂಕ್ ಬಾಹುಬಲಿ ಪ್ರಸಾದ್, ಪುರಸಭಾ ಸದಸ್ಯ ಕೊರಗಪ್ಪ, ಬಿಜೆಪಿ ಮುಖಂಡ ಕೆ.ಪಿ ಜಗದೀಶ ಅಧಿಕಾರಿ, ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಪುರಸಭೆ ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದಿವಾಕರ ಶೆಟ್ಟಿ ತೋಡಾರು, ಗೌರವಾಧ್ಯಕ್ಷ ಶರತ್ ಡಿ ಶೆಟ್ಟಿ, ಪುರಸಭಾ ಸದಸ್ಯ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು. ದೀಪಕ್ ರಾಜ್ ಕೊಡಂಗಲ್ಲು ಸ್ವಾಗತಿಸಿದರು, ಶ್ರೀರಾಜ್ ಸನೀಲ್ ಬೆಳುವಾಯಿ ನಿರೂಪಿಸಿದರು ಮತ್ತು ವಂದಿಸಿದರು.

ADVRTISEMENT

Leave a Reply

Your email address will not be published. Required fields are marked *