ಭಜನೆಯಿಂದಾಗಿ ಸುಸಂಸ್ಕೃತ ಸಮಾಜ ನಿರ್ಮಾಣ : ಲಕ್ಷ್ಮಣ ಸುವರ್ಣ  ಅಳಿಯೂರು

ಮೂಡುಬಿದಿರೆ: ಭಜನೆ ಮಾಡುವುದರಿಂದಾಗಿ ಮಕ್ಕಳಲ್ಲಿ ಜ್ಞಾನವೃದ್ಧಿ ಆಗುವುದು ಹಾಗೂ ಕುಣಿತ ಭಜನೆಯಿಂದಾಗಿ ದೈಹಿಕವಾಗಿಯೂ ಸದೃಢರಾಗುತ್ತಾರೆ. ಭಜನಾ ಕಾರ್ಯಕ್ರಮದ ಜೊತೆಗೆ ಸಂಸ್ಕಾರಯುತ ಶಿಕ್ಷಣವನ್ನು ಕೊಡುವುದು ಅಗತ್ಯವಿದೆ ಎಂದು ಮೂಡುಬಿದಿರೆ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು  ಅಧ್ಯಕ್ಷ  ಲಕ್ಷ್ಮಣ ಸುವರ್ಣ ಹೇಳಿದರು.
ಅವರು ಪಣಪಿಲದಲ್ಲಿ ನಡೆದ ಭಜನಾ ಮಂಡಳಿಯ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ ಅಳಿಯೂರು  ಮಾಹಿತಿ ನೀಡಿದರು.
ಭಜನಾ ತರಬೇತಿ ಗುರುಗಳಾದ ನಾಗೇಶ್ ನೆರಿಯ ,ಅಭಿಷೇಕ್ ಚಾರ್ಮಾಡಿ ಭಜನಾ ತರಬೇತಿ ನೀಡಿದರು.
ಗ್ರಾಮ ಪಂಚಾಯತ್ ಸದಸ್ಯರಾದ ದೀಕ್ಷಿತ್ ಪಣಪಿಲ, ಸುನಿಲ್ ಪಣಪಿಲ, ಸದಾನಂದ ಕಂಬಳಬೆಟ್ಟು,  ಪ್ರಶಾಂತ್ ಪಡ್ಡಾಯಡ್ಕ ಹಾಗೂ ಹರೀಶ್ ಗುಡೆದಮೇಲು
ರವರು ಹಾಗೂ ವಿದ್ಯಾರ್ಥಿ ಪೋಷಕರು,ಊರವರು  ಉಪಸ್ಥಿತರಿದ್ದರು.
ಸಂತೋಷ್ ಪೂಜಾರಿ  ಪಣಪಿಲ  ಸ್ವಾಗತಿಸಿ.  ಅಂಗನವಾಡಿ ಶಿಕ್ಷಕಿ ಸಂಜೀವಿ ಪಣಪಿಲ  ನಿರೂಪಿಸಿ ಧನ್ಯವಾದಗೈದರು.

ADVRTISEMENT

Leave a Reply

Your email address will not be published. Required fields are marked *