ಬಡಜನರಿಗೆ ಹಕ್ಕು ಪತ್ರ ವಿತರಣೆಯಲ್ಲಿ ಕಾಂಗ್ರೆಸ್ ರಾಜಕಾರಣ-ಶಾಸಕ ಕೋಟ್ಯಾನ್ ಆರೋಪ

ಮೂಡುಬಿದಿರೆ: ಕ್ಷೇತ್ರದಲ್ಲಿ ಟೆಂಟ್ ಹಾಕಿ, ಸಣ್ಣ-ಪುಟ್ಟ ಮನೆ ಕಟ್ಟಿ ಕುಳಿತಿರುವವರಿಗೆ ಡೀಮ್ಡ್ ಫಾರೆಸ್ಟ್ನ್ನು ತೆಗೆದುಹಾಕಿ, ತಹಶೀಲ್ದಾರ, ವಿ.ಎ ಹಾಗೂ ಆರ್.ಐ ಸಭೆ ಮಾಡಿ ಮೂಡುಬಿದಿರೆ ತಾಲೂಕಿನಲ್ಲಿ ಪ್ರತಿಯೊಬ್ಬರಿಗೂ ಹಕ್ಕುಪತ್ರ ಸಿಗಬೇಕೆಂಬುದು ಅವರಿಗೆ ಸ್ಪಷ್ಟ ಸೂಚನೆಯನ್ನು ಕೊಟ್ಟ ಪ್ರಕಾರ , ತಹಶೀಲ್ದಾರ, ವಿ.ಎ ಹಾಗೂ ಆರ್.ಐ ಗಳು ಮನೆ ಮನೆಗೆ ಹೋಗಿ ಸರ್ವೇ ಮಾಡಿ ೩೧೦ ಜನರಿಗೆ ಹಕ್ಕುಪತ್ರವನ್ನು ವಿತರಿಸುವುದೆಂದು ದಾಖಲೆಗಳನ್ನು ತಯಾರಿಸಿದ್ದು, ಆದರೆ ಇದೀಗ ನಾಳೆ ಮಂಗಳವಾರದಂದು ೩೧೦ ಮಂದಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ದಿನ ನಿಗದಿಪಡಿಸಿದ್ದು, ಆದರೆ ಇದನ್ನರಿತ ಕಾಂಗ್ರೆಸ್‌ನವರು ರಾಜಕೀಯ ಮಾಡಲೆಂದೇ ಜಿಲ್ಲಾ ಉಸ್ತುವಾರಿ ಸಚಿವರ ಕೈಯಲ್ಲಿಯೇ ಶುಕ್ರವಾರದಂದು ಹಕ್ಕುಪತ್ರ ನೀಡಲು ನಿರ್ಧರಿಸಿದ್ದಾರೆ, ಆದರೆ ಆ ದಿನ ನಾನು ಇರುವುದಿಲ್ಲ ,ನನ್ನ ಕ್ಷೇತ್ರದ ಬಡಜನರಿಗೆ ಹಕ್ಕುಪತ್ರಗಳನ್ನು ನನ್ನ ಕೈಯಿಂದಲೇ ನೀಡಬೇಕೆನ್ನುವ ನನ್ನ ಇಚ್ಚೆ ಸಾಧ್ಯವಾಗುತ್ತಿಲ್ಲ, ಕಾಂಗ್ರೆಸ್ ಅಭಿವೃದ್ಧಿ ವಿಚಾರದಲ್ಲಿ ಕ್ಷುಲಕ ರಾಜಕಾರಣವನ್ನಿಟ್ಟುಕೊಂಡು ಅಭಿವೃದ್ಧಿಯ ಕೆಲಸ-ಕಾರ್ಯಗಳಿಗೆ ತಡೆಯುಂಟು ಮಾಡುತ್ತಿದ್ದಾರೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಆರೋಪಿಸಿದರು
ಅವರು ಸೋಮವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ಹಕ್ಕುಪತ್ರ ವಂಚಿತರಿಗೆ ಹಕ್ಕುಪತ್ರ ನೀಡಬೇಕು, ಬಡಜನರಿಗೆ ಅದೊಂದು ದೊಡ್ಡ ಆಸ್ತಿ ಇದ್ದಂತೆ, ಕಳೆದ ಆರು ತಿಂಗಳಿಂದ ಪ್ರಯತ್ನಪಟ್ಟು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಯನ್ನು ಕೊಟ್ಟು, ಇದೀಗ ಹಕ್ಕುಪತ್ರಗಳನ್ನು ವಿತರಿಸುವ ವೇಳೆಗೆ ಕಾಂಗ್ರೆಸ್‌ನವರು ಉಸ್ತುವಾರಿ ಸಚಿವರಿಂದ ಕೊಡಿಸುತ್ತಾರೆ ಎನ್ನುವ ವಿಚಾರ ತಹಶಿಲ್ದಾರ್ ಅವರಿಂದ ತಿಳಿದು ಬಂತು. ಅಭಿವೃದ್ಧಿ ಕೆಲಸಗಳನ್ನು ನಾವು ಮಾಡುವುದು ಆದರೆ ಅದರ ಉದ್ಘಾಟನೆಯನ್ನು ಮಾಡಲು ಬಿಡುವುದಿಲ್ಲ. ಎಂದ ಅವರು ಈ ಹಸ್ತಕ್ಷೇಪದಲ್ಲಿ ಮಾಜಿ ಸಚಿವರಾದ ಅಭಯಚಂದ್ರರವರ ಪಾತ್ರವಿಲ್ಲ, ಅವರೆಂದೂ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವವರಲ್ಲ,ಶಾಸಕನ ಕರ್ತವ್ಯ ಏನು,ಕೆಲಸವೇನು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ, ಕಳೆದ ಎರಡು ಅವಧಿಗಳಿಂದ ಅವರು ನನಗೆ ಸದಾ ಪ್ರೋತ್ಸಾಹ, ಸಲಹೆಗಳನ್ನು ನೀಡುತ್ತಿದ್ದಾರೆ ಎಂದ ಅವರು ಇದರಲ್ಲಿ ಕಾಂಗ್ರೆಸ್ ನ ಬೇರೆ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದರು.
ಕಳೆದ ಅವಧಿಯಲ್ಲಿ ಸಾಕಷ್ಟು ಅನುದಾನವನ್ನು ಕ್ಷೇತ್ರಕ್ಕೆ ತಂದು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ, ಆದರೆ ಈಬಾರಿ ಸರಕಾರ ಯಾವುದೇ ಅನುದಾನ ನೀಡುತ್ತಿಲ್ಲ,ರಸ್ತೆ ರಿಪೇರಿಗೆಂದು ಒಂದೈದು ಲಕ್ಷ ಬೇಕಾದರೂ ಸರಕಾರದಿಂದ ಸಿಗುತ್ತಿಲ್ಲವೆಂದು ಹೇಳಿದ ಅವರು, ಅಭಿವೃದ್ಧಿ ವಿಚಾರದಲ್ಲಿ ನಾನೆಂದೂ ರಾಜಕೀಯ ಮಾಡಿದವನಲ್ಲ,ಜನರಿಗೆ ಯಾವುದಾದರೂ ಉಪಯೋಗವಾಗುವಂತಹ ಯೋಜನೆಗಳನ್ನು ತರಬೇಕೆಂಬ, ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂದುಕೊಂಡರೂ ಕೆಲ ಕಾಂಗ್ರೆಸಿಗರು ಅದಕ್ಕೆ ಅಡಚಣೆಯನ್ನುಂಟು ಮಾಡುತ್ತಿದ್ದಾರೆ. ಆ ಕೆಲಸವನ್ನು ಮಾಡಬೇಡಿ ಯಾವುದೇ ರಾಜಕೀಯ ಪಕ್ಷವಾಗಿರಲಿ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣವನ್ನು ಮಾಡದಿರಿ ಎಂದು ಮನವಿ ಮಾಡಿದರು.
ಪುರಸಭಾಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖಂಡರಾದ ಶಾಂತಿಪ್ರಸಾದ್ ಹೆಗ್ಡೆ, ರಂಜಿತ್ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ADVRTISEMENT

Leave a Reply

Your email address will not be published. Required fields are marked *