ಮೂಡುಬಿದಿರೆ: ತಾಲೂಕಿನಾದ್ಯಾಂತ ಸರಕಾರಿ ಬಸ್ಸು ಓಡಾಡಬೇಕೆಂಬುದು ಇಲ್ಲಿನ ಜನರ ಬಹುಕಾಲದ ಬೇಡಿಕೆ. ಆ ಬೇಡಿಕೆ ಇದೀಗ ಪೂರ್ಣಗೊಂಡಿದೆ. ಸಾರಿಗೆ ಇಲಾಖೆಯು ಮೂಡುಬಿದಿರೆ ,ಕಾರ್ಕಳ ಮಂಗಳೂರಿಗೆ ಬಸ್ಸು ಪ್ರಯಾಣದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬೆಳಿಗ್ಗೆ 6.45 ರಿಂದ ಆರಂಭವಾಗಿ ಸಂಜೆ 6.15 ರವರೆಗೆ ಕೆಎಸ್ ಆರ್ ಟಿಸಿ ಬಸ್ಸು ಸಂಚರಿಸಲಿದೆ.

ಮಂಗಳೂರಿನಿಂದ ಕೈಕಂಬ- ಎಡಪದವು- ಮೂಡುಬಿದಿರೆ- ಬೆಳುವಾಯಿ ಮಾರ್ಗವಾಗಿ ಕಾರ್ಕಳದವರೆಗೆ ಸುಮಾರು 55ಕಿ.ಮೀ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸನ್ನು ಚಲಾಯಿಸಲು ಜನರ ಬೇಡಿಕೆಯು ಯಶಸ್ವಿಯಾಗಿದೆ.
ದಿನ ನಿತ್ಯ ಬಸ್ ಸಂಚಾರದ ಸಮಯದ ವೇಳಾಪಟ್ಟಿಯು ಈ ಮೇಲಿನಂತಿದೆ
