ಮೂಡುಬಿದಿರೆ: ಬುಧವಾರ ನಡೆದ ಭಾರೀ ಮಳೆಯ ಪರಿಣಾಮ, ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಡ್ಕದಲ್ಲಿ ಹಲವು ಹಾನಿ ಸಂಭವಿಸಿದೆ. ಸತೀಶ್ ರಾವ್ ಮತ್ತು ದರಣೇಂದ್ರ ಜೈನ್ ಅವರ ಮನೆಗಳ ಆವರಣಗೋಡೆಗಳು ಕುಸಿದಿವೆ.
ಸ್ಥಳೀಯ ಎಸ್ ಕೆ.ಎಫ್ ಕಂಪೆನಿಯ ಅಪಾಯಕಾರಿ ಆವರಣಗೋಡೆಯೂ ಮಳೆಯಿಂದ ಬಿದ್ದು ಹೋಗಿದೆ. ಬನ್ನಡ್ಕ ಪಾಡಿಯಾರ್ ಗೆ ಹೋಗುವ ಮುಖ್ಯ ರಸ್ತೆಯು ಬಿರುಕು ಬಿಟ್ಟಿದ್ದು, ಜನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
Leave a Reply