ಮೂಡುಬಿದಿರೆ: ಇತ್ತೀಚಿನ ಭಾರಿ ಮಳೆಯಿಂದಾಗಿ ನಾಗರಕಟ್ಟೆ ಪ್ರದೇಶದಲ್ಲಿ ಅನೇಕ ಮನೆಗಳು ಜಲಾವೃತಗೊಂಡಿವೆ. ಈ ಪ್ರದೇಶದಲ್ಲಿ ನಿರ್ಮಿಸಿರುವ ಸೇತುವೆ ಮೊದಲು ಕಿರಿದಾಗಿದ್ದು, ಪುರಸಭೆ ಅದರ ಅಗಲವನ್ನು ಹೆಚ್ಚಿಸಿಕೊಂಡು ಹೊಸದಾಗಿ ನಿರ್ಮಿಸಿದ ಬಳಿಕ ನೀರು ಸರಾಗವಾಗಿ ಹರಿದು ಹೋಗುತ್ತಿತ್ತು. ಆದರೆ ಈ ಬಾರಿ ಸುರಿಯುತ್ತಿರುವ ಹೆಚ್ಚಿನ ಮಳೆಯಿಂದಾಗಿ ತೋಡಿನಲ್ಲಿ ನೀರು ತುಂಬಿಕೊಂಡು, ಪಕ್ಕದಲ್ಲಿರುವ ಹಡೀಲು ಬಿದ್ದಿರುವ ಗದ್ದೆಗಳ ಮೇಲೆ ಹರಿದಿದ್ದು, ವಸಂತ ಭಂಡಾರಿ ಮತ್ತು ಮೋಹನ್ ಕೋಟ್ಯಾನ್ ಅವರ ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.
ಭಾರಿ ಮಳೆಯಿಂದಾಗಿ ಆ ಪ್ರದೇಶದ ಜನರು ಆತಂಕಗೊಂಡಿದ್ದಾರೆ, ಮತ್ತು ಸಹಾಯಕ್ಕಾಗಿ ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಪುರಸಭೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಲು ಕ್ರಮಗಳನ್ನು ಕೈಗೊಂಡಿದ್ದಾರೆ.
Leave a Reply