ಯುವವಾಹಿನಿ ಕೇಂದ್ರ ಘಟಕದಿಂದ 37ನೇ ವಾಷಿ೯ಕ ಸಮಾವೇಶ ಉದ್ಘಾಟನೆ

ಮೂಡುಬಿದಿರೆ : ಕನಾ೯ಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.)ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ  ಯುವವಾಹಿನಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಭಾನುವಾರ ಕನ್ನಡ  ಭವನದಲ್ಲಿ ನಡೆದ 37 ನೇ ವಾರ್ಷಿಕ ಸಮಾವೇಶವನ್ನು ಶಾಸಕ ಉಮಾನಾಥ್ ಎ ಕೋಟ್ಯಾನ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ರಾಜಕೀಯ ರಹಿತವಾಗಿ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ದೇಶದಲ್ಲೇ ನಂಬರ್ ವನ್ ಸಂಘಟನೆಯಾಗಿ ಯುವವಾಹಿನಿ ಘಟಕವು ಮೂಡಿ ಬರಲಿ ಎಂದು ಶುಭಹಾರೈಸಿದರು.
ಹೈಕೋರ್ಟ್ ನ ನಾಮನಿರ್ದೇಶಿತ ಹಿರಿಯ ನ್ಯಾಯವಾದಿ ತಾರಾನಾಥ ಪೂಜಾರಿ ಮಾತನಾಡಿ ಅಧಿಕಾರವು ಜವಾಬ್ದಾರಿ, ವಿವೇಚನೆಯು ಹೊಣೆಗಾರಿಕೆಯಾಗಿ, ಸಂಘ ಸಂಸ್ಥೆಗಳು ಪರಿವರ್ತನೆಯಾಗಬೇಕು. ಗುಪ್ತತೆ ಮರೆಯಾಗಿ ಪಾರದರ್ಶಕತೆ ಮೆರೆಯಬೇಕು ಎಂದರು.
ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ.ಪೂಜಾರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಯುವ ಸಿಂಚನ’ ವಾರ್ಷಿಕ ವಿಶೇಷಾಂಕವನ್ನು ಭಾರತ್ ಕೊ ಆಪರೇಟಿವ್ ಬ್ಯಾಂಕ್ ಮುಂಬೈ ಇದರ ಅಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ ಅವರು ಬಿಡುಗಡೆಗೊಳಿಸಿ ಮಾತನಾಡಿ ನಮ್ಮ ಸಮುದಾಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ ಆದ್ದರಿಂದ ವಿದ್ಯೆ,ಉದ್ಯೋಗ, ಸಂಪರ್ಕದ ಜತೆಗೆ ಸಂಸ್ಕಾರವನ್ನು ತಿಳಿಸಿ ಕೊಡುವ ಕೆಲಸಗಳಿಗಾಗಿ ಬೇಕಿದೆ ಎಂದರು.
   ಯುವವಾಹಿನಿಯ ಪ್ರತಿಷ್ಠಿತ ‘ಸಾಧನಾ ಶ್ರೀ’ ಪ್ರಶಸ್ತಿಯನ್ನು ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್ ಅವರಿಗೆ ನೀಡಿ ಗೌರವಿಸಲಾಯಿತು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘಕ್ಕೆ ‘ಸಾಧನಾ ಶ್ರೇಷ್ಠ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ ಸಂಗೀತ ಕ್ಷೇತ್ರದ ಸಾಧಕರಾದ ಸಚಿತ್ ಪೂಜಾರಿ ನಂದಳಿಕೆ,ಸಾಂಸ್ಕೃತಿಕ, ಜಾನಪದ ,ಸಂಶೋಧನೆ, ಸಂಘಟನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಿನೇಶ್ ಸುವರ್ಣ ರಾಯಿ,ಕ್ರೀಡಾ ಕ್ಷೇತ್ರದ ಸಾಧಕರಾದ ರಕ್ಷಾ ರೆಂಜಾಳ,ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಕುಮಾರ್ ಪೂಜಾರಿ ಇರುವೈಲ್ ಹಾಗೂ ವೈದ್ಯಕೀಯ ಕ್ಷೇತ್ರದ ಸಾಧನೆಗೆ ಡಾ.ಆನಂದ ಬಂಗೇರ ಅವರಿಗೆ ‘ಯುವವಾಹಿನಿ ಗೌರವ ಅಭಿನಂದನೆ’, ಡಾ.ಶಿಲ್ಪಾ ದಿನೇಶ್ ಹಾಗೂ ಡಾ.ಉಷಾ ಅವರಿಗೆ ‘ಯುವವಾಹಿನಿ ಅಭಿನಂದನೆ’ ಮತ್ತು ಪ್ರಕೃತಿ ಮಾರೂರು ಅವರಿಗೆ ‘ಯುವವಾಹಿನಿ ಸಾಧಕ’ ಪುರಸ್ಕಾರ ನೀಡಿ ಗೌರವಿಸಲಾಯಿತು.
ಗೆಜ್ಜೆ ಗಿರಿ ಕ್ಷೇತ್ರದ ರವಿ ಪೂಜಾರಿ,ಮಂಗಳೂರು ವಿಕಾಸ ಕಾಲೇಜಿನ ಟ್ರಸ್ಟಿ ಸೂರಜ್ ಕುಮಾರ್ ಕಲ್ಯಾ,ಮೂಡುಬಿದಿರೆ ರತ್ನ ವುಮೆನ್ಸ್ ಕ್ಲಿನಿಕ್ ನ ಡಾ.ರಮೇಶ್,ಉದ್ಯಮಿ ದಿನೇಶ್ ಅಮೀನ್ ಕುಂದಾಪುರ, ಮೂಡುಬಿದಿರೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆ.ಪೂಜಾರಿ ಹಾಗೂ ಉಡುಪಿ ಕೋಟ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಸುನಿತಾ ವಿ.ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಯುವವಾಹಿನಿಯು ಅವಿಭಜಿತ ದ.ಕ,ಉಡುಪಿ ಜಿಲ್ಲೆ ಅಲ್ಲದೆ ಬೆಂಗಳೂರು ಸೇರಿ ಒಟ್ಟು 35 ಘಟಕಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ಎ.ಕೋಟ್ಯಾನ್ ಸ್ವಾಗತಿಸಿದರು.ಯುವವಾಹಿನಿ ಕೇಂದ್ರ ಸಮಿತಿಯ ನೂತನ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ.ಅವರು ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಪ್ರಜ್ಞಾ ಓಡಿಲ್ನಾಳ ಮತ್ತು ಸ್ಮಿತೇಶ್ ಎಸ್.ಬಾರ್ಯ ಕಾರ್ಯಕ್ರಮ ನಿರೂಪಿಸಿದರು.ಸಮಾವೇಶದ ನಿರ್ದೇಶಕರಾದ ಗಣೇಶ್ ವಿ.ಕೋಡಿಕಲ್ ವಂದಿಸಿದರು.

ADVRTISEMENT

Leave a Reply

Your email address will not be published. Required fields are marked *