ಅಂತರ್ ಕಾಲೇಜು ಬೆಸ್ಟ್ ಫಿಸಿಕ್: ಆಳ್ವಾಸ್ ಕಾಲೇಜ್‌ಗೆ ಸಮಗ್ರ ಪ್ರಶಸ್ತಿಆಳ್ವಾಸ್‌ನ ಕಿಶನ್‌ಗೆ ‘ಮಿಸ್ಟರ್ ಮಂಗಳೂರು ಯುನಿರ್ವಸಿಟಿ’ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ತಂಡವು ಕುಂದಾಪುರದ ಭಂಡಾಕರ‍್ಸ್ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾಲಯ ಆಶ್ರಯದಲ್ಲಿ ಜರುಗಿದ ಮಂಗಳೂರು ವಿ.ವಿ. ಅಂತರ್ ಕಾಲೇಜು ಬಾಡಿ ಬಿಲ್ಡಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆಯಿತು. ಆಳ್ವಾಸ್ ಕಾಲೇಜಿನ ಕಿಶಾನ್ ಶೆಟ್ಟಿ ಮಿ. ಯೂನಿವರ್ಸಿಟಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು. ದ್ವಿತೀಯ ತಂಡ ಪ್ರಶಸ್ತಿ ಎಸ್.ಡಿ.ಎಮ್ ಬಿ ಬಿ ಎಮ್ ಮಂಗಳೂರು, ತೃತೀಯ ತಂಡ ಪ್ರಶಸ್ತಿ ಸೆಕ್ರೇಡ್ ಹಾರ್ಟ್ ಕಾಲೇಜು ಮಡಂತ್ಯಾರು ಪಡೆಯಿತು. 15ನೇ ಬಾರಿ ಸಮಗ್ರ ಪ್ರಶಸ್ತಿಯನ್ನು ಪಡೆಯುತ್ತಾ ಬಂದಿರುವ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರವರು ಅಭಿನಂದನೆ ಸಲ್ಲಿಸಿದ್ದಾರೆ.

ADVRTISEMENT