ಸುಮಲತಾ ಬಜಗೋಳಿ ಅವರಿಗೆ “ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ”

ಮೂಡುಬಿದಿರೆ:ಕಲೆ ,ಸಾಹಿತ್ಯ,ಸಂಗೀತ, ಸಂಸ್ಕೃತಿ, ನೃತ್ಯ, ರಂಗಭೂಮಿ, ಚಲನಚಿತ್ರ, ಜಾನಪದ, ಕೃಷಿ, ಉದ್ಯಮ, ಶಿಕ್ಷಣ, ಸಮಾಜಸೇವೆ, ಪರಿಸರ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ವೈದ್ಯಕೀಯ, ಯಕ್ಷಗಾನ, ಆಡಳಿತ, ಕ್ರೀಡೆ ನಾಡು-ನುಡಿ, ಇತಿಹಾಸ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರಿಗೆ ಸಮಾಜಸೇವಕರಿಗೆ ,ಪ್ರತಿಭಾನ್ವಿತರಿಗೆ ,ಕಲಾಭೂಮಿ ಪ್ರತಿಷ್ಠಾನ ಬೆಂಗಳೂರು ವತಿಯಿಂದ “ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ” ಸಮಾರಂಭದಲ್ಲಿ ಸುಮಲತಾ ಬಜಗೋಳಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಹಿಂದೆ ಕನ್ನಡ ರಾಜ್ಯೋತ್ಸವ ದ ಪ್ರಯುಕ್ತ ಕಸ್ತೂರಿ ಸಿರಿಗನ್ನಡ ವೇದಿಕೆ (ರಿ) ಬೆಳಗಾವಿ ಇವರು ಅವರ ಸಾಹಸ ಮತ್ತು ಕ್ರೀಡಾಕ್ಷೇತ್ರಗಳಲ್ಲಿ ಸಾಧನೆಗೆ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿರುತ್ತಾರೆ.ಹಾಗೂ ಹಿಮಾಲಯ ಪರ್ವತಾರೋಹಣ ಸಾಧನೆ ಗೆ ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ADVRTISEMENT

Leave a Reply

Your email address will not be published. Required fields are marked *