ಮೂಡುಬಿದರೆಯ ರೋಟರಿ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಆಳ್ವಾಸ್ ವಿದ್ಯಾಲಯದ ಕನ್ನಡ ಭಾಷಾ ಉಪನ್ಯಾಸಕಿ ಶ್ರೀಮತಿ ಸುಧಾರಾಣಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ಭಾಷೆ ನಾಶವಾದರೆ ಸಂಸ್ಕೃತಿ ನಾಶವಾದಂತೆ.. ಯಾವುದೇ ಭಾಷೆಯ ಪದ ಅಳಿದರೆ ಜಗ ಅಳಿದಂತೆ,ಭಾಷೆಯನ್ನು ಪ್ರೀತಿಸುವುದು ಒಂದು ಭಾವನೆ…. ತಾಯಿ ಮಗಳು ಎಂಬ ಭಾವನೆಯಲ್ಲಿ ಭಾರತ ಮಾತೆಯನ್ನು ಮತ್ತು ಕರ್ನಾಟಕ ಮಾತೆ ಪೂಜಿಸಬೇಕು ಮತ್ತು ಗೌರವಿಸಬೇಕು…ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಅನಂತ ಕೃಷ್ಣರಾವ್ ಇವರು ವಹಿಸಿದ್ದರು ಸಂಚಾಲಕರಾದ ಪ್ರವೀಣ್ ಚಂದ್ರ ಜೈನ್, ಜೆ ಡಬ್ಲ್ಯೂ ಪಿಂಟೊ, ಕೋಶಾಧಿಕಾರಿ ರತ್ನಾಕರ ಜೈನ್ ಆಡಳಿತ ಮಂಡಳಿ ಸದಸ್ಯರಾದ ಯತಿ ಕುಮಾರ ಸ್ವಾಮಿ ಗೌಡ, ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಾದ ತಿಲಕಾ ಅನಂತವೀರ ಜೈನ್ ರೂಪಾ ಮಸ್ಕರೇನಸ್ ರವಿ ಕುಮಾರ್, ವೇದಿಕೆಯಲ್ಲಿ ಉಪಸ್ಥಿತರಿದ್ದರು ಈ ಸಮಯದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಪಬ್ಲಿಕ್ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಈ ಸಂದರ್ಭದಲ್ಲಿ ಶಾಲಾ ಸಂಚಿಕೆ ಸೃಷ್ಟಿ-2023-24ಯನ್ನು ಬಿಡುಗಡೆ ಗೊಳಿಸಲಾಯಿತು. ಪ್ರಾಂಶುಪಾಲ ರವಿಕುಮಾರ್ ಸ್ವಾಗತಿಸಿದರು ಉಪನ್ಯಾಸಕಿ ಯೋಗಿತಾ ವಂದನಾರ್ಪಣೆಗೈದರು.
ಕನ್ನಡ ಉಪನ್ಯಾಸಕಿ ಶ್ರೀಮತಿ ಮಾಲತಿ ಕಾರ್ಯಕ್ರಮವನ್ನು ನಿರ್ವಹಿಸಿದರು.















Leave a Reply