ಭಗವಾನ್ ಮಹಾವೀರರ ಅಹಿಂಸೋ ಪರಮೋ ಧರ್ಮ  ಸಂದೇಶ ಮನೆ-ಮನಗಳಿಗೆ ಮುಟ್ಟಿಸುವ ಕೆಲಸ ಮಾಡೋಣ-ಚಾರುಕೀರ್ತಿ ಭಟ್ಟಾರಕ  ಸ್ವಾಮೀಜಿ

ಮೂಡುಬಿದಿರೆ: ತಾಲೂಕಿನ ರಾಷ್ಟೀಯ ಹಬ್ಬಗಳ ಆಚರಣ ಸಮಿತಿ ಆಶ್ರಯದಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ನಡೆದ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಮಹಾವೀರರ ಭಾವಚಿತ್ರದೆದುರು ದೀಪ ಬೆಳಗಿಸಿ ಮೂಡುಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸಿದರು.
ನಂತರ ಸಂದೇಶ ನೀಡಿದ ಸ್ವಾಮೀಜಿ
ಭಗವಾನ್ ಮಹಾವೀರರು ಬದುಕು ಬದುಕಲು ಬಿಡು ಎಂಬ  ತತ್ವ ಸಾರಿದವರು. ಇವತ್ತಿಗೂ ಭಗವಾನ್ ಮಹಾವೀರರ ಸಂದೇಶಗಳು ಪ್ರಸ್ತುತವಾಗಿದೆ‌. ಅಹಿಂಸೋ ಪರಮೋ ಧರ್ಮ ಎಂಬ ಸಂದೇಶವನ್ನು ಮನೆ-ಮನಗಳಿಗೆ ಮುಟ್ಟಿಸುವ ಕೆಲಸ ಮಾಡೋಣ ಎಂದ ಅವರು  ಧರ್ಮ ತೀರ್ಥ ಚಿಂತನೆಯ ಮೂಲಕ ಮಹಾವೀರರು ಜಗದ ಎಲ್ಲರಿಗೂ ಕ್ಷೇಮ ಕಲ್ಪಿಸುವ ಯೋಚನೆ, ಚಿಂತನ ಕ್ರಮ ಹೊಂದಿದ್ದರು. ವಿಶ್ವ ಶಾಂತಿಯ ಮೂಲ ಆಶಯವನ್ನು ಈ ಭಾರತ ದೇಶದಿಂದ ಜಗತ್ತಿಗೆ ಬಿತ್ತರಿಸಿದವರು ಭಗವಾನ್ ಮಹಾವೀರರು ಎಂದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್  ಮಾತನಾಡಿ ಅಹಿಂಸಾ ಪರಮೋಧರ್ಮ ಎಂಬ ಮಹಾವೀರರ ಸಂದೇಶ ಇಂದಿಗೂ ಪ್ರಸ್ತುತ ಎಂದರು.
ತಹಶೀಲ್ದಾರ್ ಶ್ರೀಧರ ಅವರು ಮಾತನಾಡಿ ಶಾಂತಿ, ಸಹಬಾಳ್ವೆಯ ಮೂಲಕ ಮನುಕುಲ ಜೀವನ ಸಾಂಗವಾಗಿ ನಡೆಯುವುದನ್ನು ತಿಳಿಸಿಕೊಟ್ಟವರು ಮಹಾವೀರರು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಉಮಾನಾಥ ಎ.ಕೋಟ್ಯಾನ್ ಇಂದಿನ ಜಗತ್ತಿನ ಸಂಘರ್ಷಗಳನ್ನುನೋಡಿದರೆ
2624 ವರುಷಗಳ ಹಿಂದೆ ಪರಿಸ್ಥಿತಿ ಎಷ್ಟು ಕ್ರೂರವಾಗಿರಬಹುದು ಎಂಬುದನ್ನು ಊಹಿಸಬಹುದಾಗಿದೆ. ಅಂಥ ಕಾಲದಲ್ಲಿ ಜಗತ್ತಿಗೆ ದಿವ್ಯಜ್ಞಾನದ ಬೆಳಕನ್ನು ಇತ್ತ ಭಗವಾನ್ ಮಹಾವೀರರ ಬೋಧನೆಗಳ ಮಹತ್ವ, ಅಗತ್ಯವನ್ನು ನಾವು ಅರಿತುಕೊಳ್ಳಬೇಕಾಗಿದೆ ಎಂದರು.
ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ,
ಪುರಸಭಾಧ್ಯಕ್ಷೆ ಜಯಶ್ರೀ ಕೇಶವ, ಉಪಾಧ್ಯಕ್ಷ
ನಾಗರಾಜ ಪೂಜಾರಿ, ‘ಮುಡಾ ‘ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ತಾ.ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ ಶೆಟ್ಟಿ, ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಮುಖ್ಯ ಈ ಸಂದರ್ಭದಲ್ಲಿದ್ದರು. ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ| ಅಕ್ಷತಾ ನಾಯಕ್ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು, ಉಪತಹಶೀಲ್ದಾರರಾದ ಬಾಲಚಂದ್ರ, ತಿಲಕ್ ಕುಮಾರ್,ಸಿಬಂದಿ ವರ್ಗದವರು ಭಾಗವಹಿಸಿದ್ದರು.
ಉಪತಹಶೀಲ್ದಾರ್ ರಾಮ ಕೆ. ನಿರೂಪಿಸಿದರು.

ADVRTISEMENT

Leave a Reply

Your email address will not be published. Required fields are marked *