ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಸಂಸ್ಥೆಯಿಂದ ದ.ಕ ಜಿಲ್ಲೆಯ ಮೂರು ಅಭ್ಯರ್ಥಿಗಳಿಗೆ “ಮೇಸೆಂಜರ್ ಆಫ್ ಪೀಸ್ ಸ್ಟಾರ್ ಅವಾರ್ಡ್”


ಮೂಡುಬಿದಿರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ೭೪ ನೇ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡಿದ್ದು , ಕರ್ನಾಟಕವು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಪ್ರದರ್ಶಿಸಿ, ಹಲವಾರು ಉನ್ನತ ಸ್ಥಾನಗಳನ್ನು ಪಡೆದುಕೊಂಡಿದ್ದು, ಮೊದಲ ಸ್ಥಾನವನ್ನು ಕರ್ನಾಟಕ ಪಡೆದುಕೊಂಡಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸಂಸ್ಥೆಯು ಸೇವೆಯನ್ನು ವಿಭಿನ್ನ ರೀತಿಯಲ್ಲಿ ಮಾಡುತ್ತಿರುವವರಿಗೆ ರಾಷ್ಟ್ರೀಯ ಸಂಸ್ಥೆಯು ಕೆಲವು ಪದಕಗಳನ್ನು ನೀಡಿ ಗೌರವಿಸುತ್ತಾರೆ. ಅದರಲ್ಲಿ ೨೦೨೩ ನೇ ವರ್ಷದಲ್ಲಿ ರಾಷ್ಟ್ರ ಮಟ್ಟದಲ್ಲಿ ಕೊಡ ಮಾಡುವ ಮೇಸೆಂಜರ್ ಆಫ್ ಪೀಸ್ ಸ್ಟಾರ್ ಅವಾರ್ಡ್'' ಕರ್ನಾಟಕದ ೮ ಜನರಿಗೆ ಪ್ರಶಸ್ತಿ ಲಭಿಸಿದ್ದು, ದ.ಕ ಜಿಲ್ಲೆಯ ೩ ಅಭ್ಯರ್ಥಿಗಳಿಗೆ ಮೇಸೆಂಜರ್ ಆಫ್ ಪೀಸ್ ಸ್ಟಾರ್ ಅವಾರ್ಡ್ ಬಂದಿದೆ. ಎಂದು ಭಾರತ್ ಸ್ಕೌಟ್ಸ್ ಗೈಡ್ಸ್ನ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅವರು ಶುಕ್ರವಾರ ಆಳ್ವಾಸ್ ಸಂಸ್ಥೆಯ ಆಡಳಿತ ಕಛೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದ.ಕ ಜಿಲ್ಲೆಯಲ್ಲಿ ವಯಸ್ಕರ ವಿಭಾಗದಲ್ಲಿ ದ.ಕ ಜಿಲ್ಲಾ ಸ್ಕೌಟ್ಸ್-ಗೈಡ್ಸ್ನ ಕೋಶಾಧಿಕಾರಿ ನವೀನ್‌ಚಂದ್ರ ಅಂಬೂರಿ, ದ.ಕ ಜಿಲ್ಲೆಯ ಭಾರತ್ ಸ್ಕೌಟ್ಸ್ ಗೈಡ್ಸ್ನ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್‌ರಾಜ್.ಕೆ ಹಾಗೂ ಯುವ ವಿಭಾಗದಲ್ಲಿ ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜ್‌ನ ರೋವರ್ ಸ್ಕೌಟ್ಸ್ ಲೀಡರ್ ಚಂದ್ರಾಕ್ಷ ಅವರುಗಳಿಗೆಮೇಸೆಂಜರ್ ಆಫ್ ಪೀಸ್ ಸ್ಟಾರ್ ಅವಾರ್ಡ್” ಲಭಿಸಿದೆ ಎಂದು ತಿಳಿಸಿದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಮಾತನಾಡಿ, ಸರಕಾರಿ ಮಟ್ಟದಲ್ಲಿ ಇಲಾಖೆಗಳು ನಡೆಸುತ್ತಿರುವ ಕ್ರೀಡೋತ್ಸವ ಹಾಗೂ ಪ್ರತಿಭಾಕಾರಂಜಿಯಂತಹ ಕಾರ್ಯಕ್ರಮಗಳಲ್ಲಿ ವಿಶ್ವಾಸ ಕಳೆದುಕೊಳ್ಳುವ ರೀತಿಯಲ್ಲಿರುವ ಈ ಸಂದರ್ಭದಲ್ಲಿ ಸ್ಕೌಟ್-ಗೈಡ್ ಇದನ್ನು ಗಂಭೀರವಾಗಿ ಪರಿಗಣಿಸಿ, ಸ್ಕೌಟ್-ಗೈಡ್‌ನಲ್ಲಿರುವ ವಿದ್ಯಾರ್ಥಿಗಳಾಗಿರಬೇಕು. ಅವರು ಕನ್ನಡ ಮಾಧ್ಯಮವೇ ಆಗಲಿ, ಆಂಗ್ಲ ಮಾಧ್ಯಮವೇ ಆಗಲಿ, ಸಿಬಿಎಸ್, ಐಸಿಎಸ್, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಅಥವಾ ಯಾವುದೇ ವೃತ್ತಿಪರ ಪದವೀಧರರಾಗಿರಲಿ ಅವರನ್ನು ಕೇಂದ್ರವಾಗಿರಿಸಿಕೊಂಡು ಜಿಲ್ಲಾ ಮಟ್ಟದಲ್ಲಿ ಲ್ಲಿ ಸ್ಕೌಟ್-ಗೈಡ್ ಕ್ರೀಡೊತ್ಸವ ಹಾಗೂ ಸ್ಕೌಟ್-ಗೈಡ್ ಕಲೋತ್ಸವವನ್ನು ದ.ಕ ಜಿಲ್ಲೆಯಲ್ಲಿ ಜನವರಿಯಲ್ಲಿ ನಡೆಯಲಿದೆ ಎಂದರು.
ಎಲ್ಲಾ ಜಿಲ್ಲೆಗಳ ಸ್ಕೌಟ್-ಗೈಡ್ ಮುಖ್ಯಸ್ಥರು, ರಾಜ್ಯಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಸುಮಾರು ೨೦೦ ಸದಸ್ಯರು ಭಾಗವಹಿಸುತ್ತಾರೆ. ಈ ಬಾರಿ ವಿಶೇಷವಾಗಿ ವಿರಾಸತ್ ಸಂದರ್ಭದಲ್ಲಿ ಪಿ.ಆರ್ ಸಿಂಧ್ಯಾ ಅವರ ಮನವಿಯ ಮೇರೆಗೆ ರಾಜ್ಯಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್-ರೇಂಜರ‍್ಸ್ ನ ಸಾಂಸ್ಕೃತಿಕ ಉತ್ಸವವನ್ನು ಸುಮಾರು ೧೪೫೦ ವಿದ್ಯಾರ್ಥಿಗಳು ಹಾಗೂ ೧೨೦ ಶಿಕ್ಷಕರ ಉಪಸ್ಥಿತಿಯಲ್ಲಿ ಡಿಸೆಂಬರ್ ೧೦ ರಿಂದ ಆರಂಭಗೊಂಡು ೧೫ ರವರೆಗೆ ವಿವಿಧ ಚಟುವಟಿಕೆಗಳೊಂದಿಗೆ ಸ್ಕೌಟ್ಸ್ ಮತ್ತು ಗೈಡ್ಸ್, ಶಿಬಿರವು ಈ ಐದು ದಿನಗಳ ಅವಧಿಯಲ್ಲಿ ಭಿನ್ನವಾಗಿ ದೇಶಪ್ರೇಮ, ದೇಶಿಯತೆ, ವಿವಿಧ ಕಲೆಗಳ ಅನಾವರಣ, ಪರಿಸರ ಪ್ರಜ್ಞೆ, ಸಾಹಸ ಕ್ರೀಡೆಗಳು, ಸೌಹಾರ್ದತೆ ಮತ್ತು ಸಾಮರಸ್ಯದ ಬಗ್ಗೆ ಮನವರಿಕೆ, ಕೃಷಿ ಬದುಕು, ಕರಕುಶಲಗಳ ತಿಳುವಳಿಕೆ, ದೇಶೀಯ ಆಹಾರ ಪದಾರ್ಥಗಳ ಪರಿಚಯ, ಶಿಸ್ತು, ಸಮಯಪ್ರಜ್ಞೆ, ಸ್ವಚ್ಛತೆಯ ಪ್ರಾತ್ಯಕ್ಷಿಕೆಗಳ ಕಲಿಕೆ, ಮನೋರಂಜನೆಗಳು, ಯೋಗ, ಪ್ರಾಣಾಯಾಮ ತರಬೇತಿಗಳು, ಸೇವಾ ಮನೋಭಾವನೆ ಮೊದಲಾದ ವಿಚಾರಗಳನ್ನು ಮುಂದಿಟ್ಟುಕೊAಡು ಅರ್ಥಪೂರ್ಣ ತರಬೇತಿ ನಡೆಯಲಿರುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ ರಾಜ್ಯ ಸಂಘಟನಾ ಆಯುಕ್ತ ಎಂ ಪ್ರಭಾಕರ್ ಭಟ್, ಶಿಬಿರದ ಮೇಲ್ವಿಚಾರಕಿ ಮಲ್ಲೇಶ್ವರಿ ಜುಜಾರೆ, ದಕ್ಷಿಣ ಕನ್ನಡ ಜಿಲ್ಲಾ ಕೋಶಾಧಕಾರಿ ನವೀನ್ ಚಂದ್ರ ಅಂಬೂರಿ ಉಪಸ್ಥಿತರಿದ್ದರು.

ADVRTISEMENT