ಮೂಡುಬಿದಿರೆ: ಭಾರಿ ಮಳೆಗೆ ಕಿರು ಸೇತುವೆ ಮತ್ತು ಆವರಣಗೋಡೆ ಕುಸಿತ

ಮೂಡುಬಿದಿರೆ: ಪಟ್ಟಣದ ವಿವಿಧ ಭಾಗಗಳಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರದ ಭಾರಿ ಮಳೆಯಿಂದ ಬಡಗ ಬಸದಿ ಸಮೀಪ, ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಕಿರು ಸೇತುವೆ ಕುಸಿದು, ಸ್ಥಳೀಯರಿಗೆ ಸಮಸ್ಯೆ ಉಂಟಾಗಿದೆ.

ಇದೆ ಸಮಯದಲ್ಲಿ, ಕಾಳಿಕಾಂಬ ದೇವಾಲಯದ ಪರಿಸರದಲ್ಲಿರುವ ಜಿ. ಮೋಹನ ಶೆಣೈ ಅವರ ಆವರಣಗೋಡೆ ಸಹ ಕುಸಿದಿದೆ. ಈ ಘಟನೆಯಿಂದ ತೀವ್ರ ತೊಂದರೆ ಉಂಟಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ADVRTISEMENT