ಮೂಡುಬಿದರೆ:ಕಾಂತಾವರ ಕನ್ನಡ ಸಂಘದ ನುಡಿ ತೇರು ಸಾಕ್ಷ್ಯ ಚಿತ್ರ ವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಂತರ್ಜಾಲಕ್ಕೆ ಲೋಕಾರ್ಪಣೆ ಮಾಡಿದರು.
ಕಾಂತಾವರ ಕನ್ನಡ ಸಂಘದ ಮಾದರಿ ಕಾರ್ಯ ಪ್ರತಿಯೊಂದು ಸಂಘಟನೆಗಳಿಗೂ ಪ್ರೇರಣೆಯಾಗಿದೆ.
ಕನ್ನಡ ಕಟ್ಟುವ ಕೆಲಸವನ್ನು ಕಾಂತಾವರ ಕನ್ನಡ ಸಂಘ ಯಶಸ್ವಿಯಾಗಿ ಮಾಡುತ್ತಿದೆ ಎಂದರು. ಡಾಕ್ಟರ್ ನಾ ಮೊಗಸಾಲೆ ಅವರ ಕರ್ತೃತ್ವ ಶಕ್ತಿ ಇಚ್ಛಾಶಕ್ತಿಗಳ ಮೂಲಕ ಕನ್ನಡ ಸಂಘ ಇವತ್ತು ಬಹುದೊಡ್ಡ ಕಾರ್ಯವನ್ನು ಮಾಡಿದೆ ಎಂದು ಶ್ಲಾಘಿಸಿದರು.
ಕಾಂತಾವರ ಕನ್ನಡ ಸಂಘಕ್ಕೆ 50ರ ಶುಭ ಸಮಯದಲ್ಲಿ ಈ ಒಂದು ಸಾಕ್ಷ್ಯ ಚಿತ್ರವನ್ನು ನಿರ್ಮಿಸಲಾಗಿದೆ. ಕನ್ನಡ ಸಂಘದ ಸಾಧನೆ ರಾಜ್ಯದ ಕನ್ನಡ ಅಭಿಮಾನಿಗಳಿಗೆ ಲಭ್ಯವಾಗುವ ಸದುದ್ದೇಶದಿಂದ ಅಂತರ್ಜಾಲದ ಮೂಲಕ ಲೋಕಾರ್ಪಣೆಗೊಳಿಸಲಾಗಿದೆ ಎಂದು ನಿರ್ದೇಶಕ ಹರೀಶ್ ಕೆ ಆದೂರು ತಿಳಿಸಿದರು.
ಕನ್ನಡ ಸಂಘ ಕಾಂತಾವರದ ಸ್ಥಾಪಕ ಅಧ್ಯಕ್ಷ ಡಾ. ನಾ ಮೊಗಸಾಲೆ, ಕಾರ್ಯದರ್ಶಿ ಸದಾನಂದ ನಾರಾವಿ,.ಸತೀಶ್ ಕುಮಾರ್ ಕೆಮ್ಮಣ್ಣು, ಸಂಜೀವ ಕೋಟ್ಯಾನ್ ಇದ್ದರು.

Leave a Reply