ಬಡ ಮಕ್ಕಳು, ಮಧ್ಯಮವರ್ಗದ ವಿದ್ಯಾರ್ಥಿಗಳು ವಿದ್ಯಾರ್ಜನೆಯಿಂದ ವಂಚಿತರಾಗಬಾರದು-ಶಾಸಕ ಕೋಟ್ಯಾನ್

ಮೂಡುಬಿದಿರೆ: ಆಗಿನ ಸಚಿವರಾಗಿದ್ದ ನಾಗೇಶ್ ಅವರು ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ನಮ್ಮ ಕ್ಷೇತ್ರಕ್ಕೆ ೪೦ ರಿಂದ ೪೫ ಕೊಠಡಿಗಳನ್ನು ತಂದಿದ್ದು, ೩೦ ಕೊಠಡಿಗಳನ್ನು ಪ್ರಾಥಮಿಕ ಶಾಲೆಗೆ, ಹಾಗೂ ಮುಲ್ಕಿ, ಅಳಿಯೂರು, ಮಿಜಾರು ಭಾಗದಲ್ಲಿ ತಲಾ ೧ ಕೋಟಿಯಂತೆ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಶ್ರೀಮಂತ ವರ್ಗದ ಮಕ್ಕಳಿಗೂ, ಮಧ್ಯಮ ವರ್ಗದ ಮಕ್ಕಳಿಗೂ ಯಾವುದೇ ರೀತಿಯ ಭೇದ ಇರಬಾರದೆಂಬ ಉದ್ದೇಶದಿಂದ ಸರಕಾರಿ ಶಾಲೆÀಯ ಮಕ್ಕಳಿಗೂ ಉತ್ತಮ ಸೌಲಭ್ಯಗಳನ್ನು ಸಿಗಬೇಕು. ಇಂದು ಬಡ ಮಕ್ಕಳು, ಮಧ್ಯಮವರ್ಗದ ಮಕ್ಕಳು ವಿದ್ಯಾರ್ಜನೆಯಿಂದ ವಂಚಿತರಾಗಬಾರದೆAಬ ನಿಟ್ಟಿನಲ್ಲಿ ಎಲ್ಲಾ ಮಕ್ಕಳಿಗೂ ಸರಕಾರದ ಯೋಜನೆಯಡಿಯಲ್ಲಿ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುತ್ತಿದೆ. ಇದರ ಸದುಪಯೋಗವನ್ನು ಎಲ್ಲಾ ಮಕ್ಕಳು ಪಡೆದುಕೊಳ್ಳಿ ಮುಲ್ಕಿ ಮೂಡುಬಿದಿರೆಯ ಶಾಸಕ ಉಮಾನಾಥ ಎ ಕೋಟ್ಯಾನ್ ಹೇಳಿದರು.


ಅವರು ಸೋಮವಾರ ದರೆಗುಡ್ಡೆ ಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಲ್ಲಪುತ್ತಿಗೆಯಲ್ಲಿ ವಿವೇಕ ಶಾಲಾ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ವಿವೇಕ ಶಾಲಾ ಕೊಠಡಿಯನ್ನು ಹಾಗೂ ಕೆಲ್ಲಪುತ್ತಿಗೆಯ ಆದಿವಾಸಿ ಕೊರಗರ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು.
ಆದಿವಾಸಿ ಕೊರಗರ ಸಮುದಾಯ ಭವನಕ್ಕೆ ಸಂಪೂರ್ಣವಾದ ವಿದ್ಯುತ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದರೊಂದಿಗೆ ೧೮ ಲಕ್ಷ ವೆಚ್ಚದಲ್ಲಿ ಕೊರಗರ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಇಂದು ಸರಕಾರದಿಂದ ಸಿಗುವಂತಹ ಮೂಲಭೂತ ಸೌಕರ್ಯವನ್ನು ಪಡೆದು ಉತ್ತಮ ರೀತಿಯಲ್ಲಿರಬೇಕು. ನಿಮ್ಮ ಯಾವುದೇ ಕಾರ್ಯಕ್ರಮಗಳಿದ್ದರೂ ಇದ್ದೇ ಭವನದಲ್ಲಿ ಮಾಡಿ ಇದರ ಪ್ರಯೋಜನವನ್ನು ಪಡೆಯಿರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ದರೆಗುಡ್ಡೆ ಪಂಚಾಯತ್ ಅಧ್ಯಕ್ಷ ಅಶೋಕ್ ಬೇಲೊಟ್ಟು ಮಾತನಾಡಿ, ದರೆಗುಡ್ಡೆ ವ್ಯಾಪ್ತಿಯಲ್ಲಿ ಶಾಲಾ ಕೊಠಡಿಯ ಅವಶ್ಯಕತೆ ಇದೆ ಎಂದಾಗ ಶಾಸಕರು ಶಾಲಾ ಕೊಠಡಿ, ಅಂಗನವಾಡಿ ಕೇಂದ್ರಕ್ಕೆ ಅನುದಾನವನ್ನು ನೀಡಿ ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ. ಆದರೆ ಇನ್ನೂ ಹಲವಾರು ಬೇಡಿಕೆಗಳಿದ್ದು, ಅದನ್ನು ಈಡೇರಿಸುತ್ತಾರೆಂಬ ಭರವಸೆ ಇದೆ ಎಂದ ಅವರು ತಮ್ಮ ಪಂಚಾಯತ್ ವ್ಯಾಪ್ತಿಗೆ ಅನುದಾನವನ್ನು ಬಿಡುಗಡೆಗೊಳಿಸಿ ಅಭಿವೃದ್ಧಿ ಕೆಲಸಕ್ಕೆ ಶ್ರಮವಹಿಸಿದ ಶಾಸಕರಿಗೆ ಕೃತಜ್ಞತೆ ತಿಳಿಸಿದರು.
ದರೆಗುಡ್ಡೆ ಗ್ರಾ.ಪಂಚಾಯತ್‌ನ ಮಾಜಿ ಅಧ್ಯಕ್ಷ ಹಾಗೂ ದ.ಕ ಜಿಲ್ಲಾ ಬಿಜೆಪಿ ಮುಖಂಡ ಕೆ.ಪಿ ಜಗದೀಶ್ ಅಧಿಕಾರಿ, ಶಿಕ್ಷಣ ಇಲಾಖೆಯ ರಾಜೇಶ್ ಭಟ್, ವಜ್ರನಾಭ ಹೆಗ್ಡೆ ದೊಡ್ಡಮನೆ, ಎಸ್.ಡಿ.ಎಂ.ಸಿ ಅಧ್ಯಕ್ಷ ವಿರೇಂದ್ರ ಕೋಟ್ಯಾನ್, ಆದಿವಾಸಿ ಕೊರಗರ ಸಮುದಾಯ ಭವನದ ಕರಿಯ, ಪಂಚಾಯತ್ ಸದಸ್ಯರುಗಳು, ಮುಖ್ಯೋಪಾಧ್ಯಾಯರು, ಶಿಕ್ಷಕವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ADVRTISEMENT

Leave a Reply

Your email address will not be published. Required fields are marked *