ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಇನ್ನಿಲ್ಲ

ಮೂಡುಬಿದಿರೆ : ಕಾಮಿಡಿ ಕಿಲಾಡಿ ವಿನ್ನರ್ ಮಲ್ಪೆಯ ರಾಕೇಶ್ ಪೂಜಾರಿ (34) ಹೃದಯಾಘಾತದಿಂದ ನಿಧನ ಹೊಂದಿದರು. ಮೇ 11ರಂದು ಮಿಯ್ಯಾರಿನ ತನ್ನ ಗೆಳೆಯನ ಮೆಹೆಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾನ್ಸ್ ಮಾಡುತ್ತಿದ್ದ ಸಂದರ್ಭರಾಕೇಶ್ ಪೂಜಾರಿ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಕಾರ್ಕಳ ಗಾಜಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಬಳಿಕ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆಗಾಗಲೇ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ ಹೊಂದಿದರು ಎಂದು ತಿಳಿದುಬಂದಿದೆ.
ಮೃತರು ತಾಯಿ ಹಾಗೂ ತಂಗಿಯನ್ನು ಅಗಲಿದ್ದಾರೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಮುಕ್ತ ಸುದ್ದಿ ವಾಹಿನಿಯಲ್ಲಿ ಕಾಮಿಡಿ ಶೋ ನಡೆಸುತ್ತಿದ್ದ ರಾಕೇಶ್ ಪೂಜಾರಿ ಅವರು ಚೈತನ್ಯ ಬೈಲೂರು ತಂಡದಲ್ಲಿ ಹಾಸ್ಯ ಕಲಾವಿದರಾಗಿದ್ದರು. ಕಿರುತೆರೆಯಲ್ಲಿ ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಪ್ರಸಿದ್ಧರಾಗಿದ್ದರು

ADVRTISEMENT

Leave a Reply

Your email address will not be published. Required fields are marked *