ಮೂಡುಬಿದಿರೆ: ಕನ್ನಡ ವಿಭಾಗ, ಆಳ್ವಾಸ್ ಕಾಲೇಜು ವಿದ್ಯಾಗಿರಿ, ಮೂಡುಬಿದಿರೆ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಳ್ವಾಸ್ ನ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆದ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಕೆಲವು ಪ್ರಶ್ನೆಗಳು ಎಂಬ ವಿಚಾರ ಶಿಬಿರ-೨೦೨೪ ವನ್ನು ಬೆಂಗಳೂರು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ.ಡಾ.ವೂಡೇ ಪಿ.ಕೃಷ್ಣ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಗಾಂಧಿ ಎಂಬ ಮಹಾನ್ ಶಕ್ತಿ. ಭಾರತ ಬಿಟ್ಟು ಗಾಂಧಿ ಇಲ್ಲ. ಗಾಂಧಿ ಬಿಟ್ಟು ಭಾರತ ಇಲ್ಲ. ಭಾರತದ ನಿಜವಾದ ಶಕ್ತಿ ಅಧ್ಯಾತ್ಮ. ಅಧ್ಯಾತ್ಮ ನೆಲೆಗಟ್ಟಿನಲ್ಲಿ ದೇಶವನ್ನು ರೂಪಿಸಿದ ನಾಯಕ ಗಾಂಧೀಜಿ. ಮಹಾತ್ಮರು ಎಲ್ಲರನ್ನು ಒಗ್ಗೂಡಿಸಿ ಸಂಘಟನೆಯನ್ನು ಸಂಘಟಿಸಬೇಕಾದರೆ ಅಧ್ಯಾತ್ಮವನ್ನು ನೆಲೆಯಾಗಿರಿಸಿಕೊಂಡು ಸಂಘಟಿಸಿದರು ಎಂದ ಅವರು ಗಾಂಧೀಜಿಯವರು ಸಾರ್ವಜನಿಕ ಜೀವನಕ್ಕೆ ದೊಡ್ಡ ಆದರ್ಶ ಎಂದು ತಿಳಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ರಾಜಕೀಯದ್ದವರೆಲ್ಲ ರಾಜಕೀಯವನ್ನಷ್ಟೇ ಮಾಡಿದರು. ಆದರೆ ಮಹಾತ್ಮ ಗಾಂಧಿ ಒಬ್ಬರೇ ರಾಜಕೀಯದಲ್ಲಿದ್ದುಕೊಂಡು ಅಧ್ಯಾತ್ಮಕ್ಕೂ ಒತ್ತು ನೀಡಿದ ಮಹಾತ್ಮರು ಅಹಿಂಸೆ, ಸತ್ಯಾಗ್ರಹ ಹಾಗೂ ಸರಳತೆಯನ್ನು ಮೂಲಮಂತ್ರವಾಗಿಸಿಕೊAಡವರು. ಈ ಮೂರು ಮೂಲಮಂತ್ರಗಳನ್ನು ಅರ್ಥೈಸಿಕೊಂಡು ನಾವು ಅದನ್ನು ಅನುಸರಿಸಿದರೆ ಜಗತ್ತಿನಲ್ಲಿ ಯಾವುದೇ ಯುದ್ಧ, ಭ್ರಷ್ಟಚಾರ, ಅಥವಾ ಪರಿಸರ ಮಾಲಿನ್ಯವಾಗಲಿ ಸಂಭವಿಸುವುದಿಲ್ಲ. ಮಹಾತ್ಮರು ಅತೀ ಕಡಿಮೆ ಪದಗಳಲ್ಲಿ ದೊಡ್ಡ ಅರ್ಥವನ್ನು ಹುದುಗಿಸಿಟ್ಟಿದ್ದಾರೆ ಇದನ್ನು ಅರ್ಥ ಮಾಡಿಕೊಳ್ಳಬೇಕಾದದು ನಮ್ಮ ಸಾಮರ್ಥ್ಯ ಮತ್ತು ವಿವೇಚನೆಗೆ ಬಿಟ್ಟದ್ದು ಎಂದರು.
ಮುಖ್ಯ ಅತಿಥಿಯಾದ ಪ್ರಸಿದ್ಧ ಕವಯತ್ರಿ ಸವಿತಾ ನಾಗಭೂಷಣ್, ಆಳ್ವಾಸ್ ಕಾಲೇಜು ಪ್ರಾಂಶುಪಾಲ ಡಾ.ಕುರಿಯನ್ ಉಪಸ್ಥಿತರಿದ್ದರು.
ಗಾಂಧಿ ವಿಚಾರ ಶಿಬಿರ-೨೦೨೪ ರ ಸಂಘಟನಾ ಕಾರ್ಯದರ್ಶಿ ಡಾ. ಯೋಗಿಶ್ ಕೈರೋಡಿ ಸ್ವಾಗತಿಸಿದರು. ಮಾಧವಿ ನಿರೂಪಿಸಿ, ಧನ್ಯವಾದಗೈದರು.

Leave a Reply