ನಾಳೆಯಿಂದ ಮಾ. 19ರವರೆಗೆ ಇರುವೈಲು ವರ್ಷಾವಧಿ ಜಾತ್ರಾ ಮಹೋತ್ಸವ

ಮೂಡುಬಿದಿರೆ: ಇರುವೈಲು ಶ್ರೀ  ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮಹಾ ರಥೋತ್ಸವವು ಮಾರ್ಚ್ 11ರ ಮಂಗಳವಾರ  ಮೊದಲ್ಗೊಂಡು 19 ರ  ಬುಧವಾರದವರೆಗೆ ನಡೆಯಲಿದೆ.
11ರ ಮಂಗಳವಾರ ಬೆಳಿಗ್ಗೆ 9ಗಂಟೆಗೆ ಕುಂಟ ಮುಹೂರ್ತ.13ರ ಗುರುವಾರ ಬೆಳಿಗ್ಗೆ ನಾಗದೇವರ ಸಾನಿಧ್ಯದಲ್ಲಿ ತಂಬಿಲ ಸೇವೆ, ಮಹಾಪೂಜೆ, ಸಂಜೆ 6 ಗಂಟೆಗೆ ಅಂಕುರಾರೋಪಣ, ಉತ್ಸವ ಬಲಿ.
14ರ ಶುಕ್ರವಾರ ಬೆಳಿಗ್ಗೆ 8ರಿಂದ ಕಲಶ ಪ್ರಧಾನ ಹೋಮ,12-05ಕ್ಕೆ ಧ್ವಜಾರೋಹಣ, ಮಧ್ಯಾಹ್ನ ಅನ್ನ ಸಂತರ್ಪಣೆ,ಉತ್ಸವ ಬಲಿ, ಕಂಚಿಲಾಲೆ. ರಾತ್ರಿ 9:30 ರಿಂದ ಇರುವೈಲು  ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ.
15ರ ಶನಿವಾರ ಬೆಳಿಗ್ಗೆ 8ಗಂಟೆಯಿಂದ ನವಕಕಲಶಾಭಿಷೇಕ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ, ಸಂಜೆ 6:30ರಿಂದ ಉತ್ಸವ ಬಲಿ, ಕಟ್ಟೆ ಪೂಜೆ, ದೇವರ ಆದಿಸ್ಥಳದಲ್ಲಿ ಕಟ್ಟೆ ಪೂಜೆ,ಕೆರೆ ದೀಪೋತ್ಸವ ರಾತ್ರಿ ನಮ್ಮ ಜವನೆರ್ ಇರುವೈಲು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ.
16ರ ಆದಿತ್ಯವಾರ ಬೆಳಿಗ್ಗೆ ನವಕ ಕಲಶ ಪ್ರಧಾನ, ಮಹಾಪೂಜೆ, ಅನ್ನ ಸಂತರ್ಪಣೆ. ರಾತ್ರಿ 8 ಗಂಟೆಗೆ ಧಾರ್ಮಿಕ ಸಭೆ,8:30ಕ್ಕೆ ಭೇರಿ ತಾಡನೆ, ನಡುಬಲಿ ಉತ್ಸವ, ಚಂದ್ರಮಂಡಲ ಸೇವೆ, ಬಾಕಿಮಾರು ದೀಪೋತ್ಸವ, ಕಟ್ಟೆ ಪೂಜೆ.
17ರ ಸೋಮವಾರ ಬೆಳಿಗ್ಗೆ 8ರಿಂದ ನವಕಕಲಶ ಪ್ರಧಾನ ಹೋಮ, ಪೂರ್ವಾಹ್ನ 10-15ಕ್ಕೆ ಮಹಾ ರಥೋತ್ಸವ, ಅನ್ನ ಸಂತರ್ಪಣೆ, ರಾತ್ರಿ 7ರಿಂದ ರಥೋತ್ಸವ, ಸುಡುಮದ್ದು ಪ್ರದರ್ಶನ, ಭೂತ ಬಲಿ, ಶಯಾನೋತ್ಸವ, ಕವಾಟ ಬಂಧನ.  ಹಾಗೂ 18 ರ ಮಂಗಳವಾರ  ಬೆಳಿಗ್ಗೆ 7-15ಕ್ಕೆ ಕವಾಟ ಉದ್ಘಾಟನೆ, ಪಲ್ಲ ಪೂಜೆ,ತುಲಾಭಾರ ಸೇವೆ, ಚೂರ್ಣೋತ್ಸವ,ಮಧ್ಯಾಹ್ನ ಮಹಾ ಪೂಜೆ, 1:30ರಿಂದ  ಮಹಾ ಅನ್ನಸಂತರ್ಪಣೆ, ರಾತ್ರಿ 7ಕ್ಕೆ ಬ್ರಹ್ಮ ತಂಬಿಲ,10ರಿಂದ ಕಟ್ಟೆ ಪೂಜೆ, ಓಕುಳಿ, ಅವಭ್ರತ, ಮಾಡ್ಲಾಯಿ ದೈವ ಮತ್ತು ಶ್ರೀ ದೇವರ ಭೇಟಿ, ಮಾಡ್ಲಾಯಿ ದೈವದ ನೇಮ, ಧ್ವಜಾವರೋಹಣ.ರಾತ್ರಿ ಪಲ್ಗುಣಿ ಯುವಕ ಮಂಡಲ(ರಿ)ಇರುವೈಲು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ.
19ರ ಬುಧವಾರ ಬೆಳಿಗ್ಗೆ 8ರಿಂದ ಮಂಗಳ ಗಣಯಾಗ, ಮಹಾ ಪೂಜೆ, 12 ಗಂಟೆಗೆ ಮಂತ್ರಾಕ್ಷತೆ ಬಳಿಕ ಅನ್ನ ಸಂತರ್ಪಣೆ, ಸಂಜೆ 5ಗಂಟೆಗೆ ಹೊಸಮರಾಯ ದೈವದ ಭಂಡಾರ ಇಳಿಸುವುದು, 8 ಗಂಟೆಯಿಂದ  ಹೊಸಮರಾಯ ದೈವದ ನೇಮೋತ್ಸವ ನಡೆಯಲಿದೆ  ಎಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಪ್ರಕಟಣೆ ತಿಳಿಸಿದೆ.

ADVRTISEMENT

Leave a Reply

Your email address will not be published. Required fields are marked *