ಮೂಡುಬಿದಿರೆ: ಶ್ರೀ ಕ್ಷೇತ್ರ ಇರುವೈಲಿನಿಂದ ಕಟೀಲು ಶ್ರೀ ಭ್ರಮರಾಂಬಿಕೆಯ ಸನ್ನಿಧಿಗೆ ಊರ-ಪರವೂರ ಭಕ್ತ ವೃಂದ ಶ್ರೀ ಕ್ಷೇತ್ರ ಇರುವೈಲು ಇದರ ನೇತೃತ್ವದಲ್ಲಿ ನಾಳೆ ಮುಂಜಾನೆ 3.30 ಕ್ಕೆ ಲೋಕ ಕಲ್ಯಾಣಾರ್ಥ ಹಾಗೂ ಭಕ್ತಾದಿಗಳ ಅಭೀಷ್ಟೆಯ ಫಲಸಿದ್ಧಿಗಾಗಿ ೧೨ ನೇ ವರ್ಷದ ಭಕ್ತಿಯ ನಡಿಗೆ ಅಮ್ಮನೆಡೆಗೆ ಪಾದಯಾತ್ರೆಯು ಭಜನಾ ಸಂಕೀರ್ತನೆಯೊಂದಿಗೆ ಸಾಗಲಿದೆ. ಭಕ್ತಾದಿಗಳು ಸಮಯಕ್ಕೆ ಸರಿಯಾಗಿ ಕ್ಷೇತ್ರದಲ್ಲಿ ಹಾಜರಾಗಬೇಕು. ಹಾಗೂ ಕಟೀಲಿನಿಂದ ಇರುವೈಲಿಗೆ ಬರಲು ವಾಹನದ ವ್ಯವಸ್ಥೆ ಇದ್ದು, ಲಘು ಉಪಹಾರದ ವ್ಯವಸ್ಥೆಯು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Leave a Reply