ಉದ್ಘಾಟನೆಗೆ ಮುನ್ನವೇ ಕುಸಿಯುವ ಭೀತಿಯಲ್ಲಿ ಕಲ್ಲಮುಂಡ್ಕೂರು ಹರಿಯಾಳ ಕಾಲು ಸಂಕ.
ಬಲ ಕಳೆದುಕೊಂಡ ತಡೆಗೋಡೆ
ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಿಯಾಳ ಬಳಿ ಸುಮಾರು 15 ಲಕ್ಷ ರೂ.ವೆಚ್ಚದಲ್ಲಿ ಕಾಲು ಸಂಕವನ್ನು ನಿರ್ಮಾಣ ಮಾಡಲಾಗಿದ್ದರೂ ಅದರ ತಡಗೋಡೆಯೀಗ ಮಳೆಯಿಂದಾಗಿ ಕುಸಿತಗೊಂಡಿದ್ದು ಕಾಲು ಸಂಕವೂ ಕುಸಿತ ಕಾಣುವ ಅಪಾಯದಲ್ಲಿದೆ.ಹಾಗಾಗಿ ಈ ಭಾಗದ ಜನರು ಕೂಡಾ ಈ ಪೊಸಾ ಕಾಲು ಸಂಕವನ್ನು ದಾಟಲು ಭಯಪಡುತ್ತಿದ್ದಾರೆ.
ಲೋಕೋಪಯೋಗಿ ಇಲಾಖೆ ಮಂಗಳೂರು ವಿಭಾಗದ ವತಿಯಿಂದ ಈ ಕಾಲು ಸಂಕ ನಿರ್ಮಾಣ ಮಾಡಲಾಗಿದ್ದು ಇದಕ್ಕೆ ಸುಮಾರು 15 ಲಕ್ಷ ರೂ.ವಿನಿಯೋಗಿಸಲಾಗಿದೆ.
ಕಾಲುಸಂಕ ನಿರ್ಮಾಣವಾಗಿದ್ದು ಉದ್ಘಾಟನೆ ಇನ್ನೂ ಆಗಿಲ್ಲ.ಆದರೆ ಉದ್ಘಾಟನೆಗೆ ಮುನ್ನವೇ ಅಪಾಯದಲ್ಲಿದ್ದು ನಿಜವಾಗಿಯೂ ಇದಕ್ಕೆ 15 ಲಕ್ಷ ರೂ.ಖರ್ಚಾಗಿದೆಯಾ ಎಂದು ಈ ಭಾಗದ ಜನರು ಪ್ರಶ್ನಿಸುತ್ತಿದ್ದಾರೆ.
