ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ಯುವ ಸಂಘಟನೆ ವತಿಯಿಂದ ಮೂಡುಬಿದಿರೆ ಪುರಸಭಾ ವ್ಯಪ್ತಿಯ ಗಾಂಧಿನಗರ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.
ವಾರ್ಡ್ ಸದಸ್ಯರಾದ ಶ್ರೀಮತಿ ದಿವ್ಯ ಜಗದೀಶ್ ಎಂ.ಕೆ ಮುಖ್ಯಾತೀತಿಯಾಗಿ ಆಗಮಿಸಿದ್ದರು, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ ಸುನೀತಾ ಶೆಟ್ಟಿ, ಉಪಾಧ್ಯಕ್ಷರಾದ ಯಶೋಧರ ಬಂಗೇರ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಕಸ್ತೂರಿ, ನೇತಾಜಿ ಬ್ರಿಗೇಡ್ ಸಂಸ್ಥಾಪಕರಾದ ರಾಹುಲ್ ಕುಲಾಲ್, ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ನಂದ, ಉಪಾಧ್ಯಕ್ಷರಾದ ಶರತ್ ಕುಂದರ್, ಕಾರ್ಯದರ್ಶಿಗಳಾದ ಯಶವಂತ ಮಾಸ್ತಿಕಟ್ಟೆ, ನಿತಿನ್ ಭಟ್, ಶರಣ್ ಶೆಟ್ಟಿ, ಶಾಲಾ ಎಸ್.ಡಿ.ಎಂ.ಸಿ ಸದಸ್ಯರುಗಳು, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.







Leave a Reply