ಸೋರಿದ ಗ್ಯಾಸ್ ಸ್ಟವ್: ವಿದ್ಯುತ್ ಉಪಕರಣಗಳಿಗೆ ಹಾನಿ

ಮೂಡುಬಿದಿರೆ: ಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ವಿದ್ಯುತ್ ಉಪಕರಣಗಳಿಗೆ ಹಾನಿಯುಂಟಾದ ಘಟನೆ ತಾಲೂಕಿನ ತೋಡಾರಿನಲ್ಲಿ ನಡೆದಿದೆ.
ತೋಡಾರು ಹಿದಾಯತ್ ನಗರದ ವಿಜಯ್ ಎಂಬವರ ಮನೆಯಲ್ಲಿ ಇಂದು ಸಂಜೆ ಖಾಸಗಿ ಕಾರ್ಯಕ್ರಮವಿತ್ತು ಅದಕ್ಕೆ ಬಾಡಿಗೆಗೆ ಗ್ಯಾಸ್ ಸ್ಟವ್ ನ್ನು ತರಿಸಲಾಗಿತ್ತು. ಅಡಿಗೆ ಮಾಡುತ್ತಿದ್ದ ಸಂದರ್ಭದಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡು ಫ್ರಿಡ್ಜ್ ಮತ್ತು ಸ್ವಿಚ್ ಬೋಡ್ ನ ಕನೆಕ್ಷನ್ ಸುಟ್ಟು ಹಾಕಿದೆ ತಕ್ಷಣ ಗ್ಯಾಸ್ ಸ್ಟವ್ ನ್ನು ಹೊರಗೆ ಸಾಗಿಸಲಾಗಿದೆ.
ಸ್ಥಳೀಯರು ಮತ್ತು ಮೂಡುಬಿದಿರೆ ಅಗ್ನಿಶಾಮಕದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದು ಮುಂದೆ ಆಗಬಹುದಾದ ಭಾರಿ ದೊಡ್ಡ ಅನಾಹುತವನ್ನು ತಪ್ಪಿಸುವ ಮೂಲಕ ಜನರನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.

ADVRTISEMENT

Leave a Reply

Your email address will not be published. Required fields are marked *