ಲಯನ್ಸ್ ಕ್ಲಬ್ ಅಲಂಗರು ವತಿಯಿಂದ ಸೇವಾ ಕಾರ್ಯಕ್ರಮ: ಮಕ್ಕಳಿಗೆ ಸ್ವಾತಂತ್ರ್ಯ ದಿನದ ಅಂಗವಾಗಿ ಕೊಡುಗೆ

ಮೂಡಬಿದಿರೆ: 14.8.24 ರಂದು ನಡೆದ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು.

ಪ್ರತ್ಯೇಕವಾಗಿ, ಇವತ್ತಿನ ಕಾರ್ಯಕ್ರಮವು ಲಯನ್ ರೋನಾಲ್ಡ್ Cardoza ರವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನೆರವೇರಿಸಲಾಯಿತು. ದಕ್ಷಿಣ ಕನ್ನಡದ ಮೂಡಬಿದ್ರಿಯ ನಡ್ಯೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ, ಸ್ವಾತಂತ್ರ್ಯ ದಿನದ ಅಂಗವಾಗಿ, ಟೀಶರ್ಟ್, ಟೈ, ಐ ಡಿ, ಬೆಲ್ಟ್ ಸೇರಿದಂತೆ ಸುಮಾರು 5800 ರೂಪಾಯಿ ವೆಚ್ಚದ ಕೊಡುಗೆಯನ್ನು ನೀಡಲಾಯಿತು.

ಈ ಸಂಧರ್ಭದಲ್ಲಿ, ಲಯನ್ ರೋನಾಲ್ಡ್ ಕಾರ್ಡೋಜಾ ರವರಿಗೆ ವಿಶೇಷ ಧನ್ಯವಾದಗಳು.

ಹಾಗೂ, ಲಯನ್ ಸುನಿಲ್ ಮೆಂಡೋನ್ಸ ರವರು ಮಕ್ಕಳಿಗೆ ಸಿಹಿಗಳನ್ನು ನೀಡುವುದರ ಮೂಲಕ ಸಹಕಾರ ನೀಡಿದರು. ನಿಮಗೂ ಧನ್ಯವಾದಗಳು.

ಅದರ ಜೊತೆಗೆ, ಲಯನ್ ಅಮಿತ್ ರವರು ಮಕ್ಕಳಿಗೆ ಪೆನ್ಸಿಲ್ ಕಿಟ್ ನೀಡಿ ತಮ್ಮ ಸಹಕಾರವನ್ನು ನೀಡಿದರು. ನಿಮ್ಮ ಸಹಕಾರಕ್ಕೂ ಧನ್ಯವಾದಗಳು.

ಈ ಕಾರ್ಯಕ್ರಮದಲ್ಲಿ ಲಯನ್ ಜೆಸಿಂತಾ ಡಿಮೆಲ್ಲೋ, ಅಧ್ಯಕ್ಷರು, ಹಾಗೂ ಕೋಶಾಧಿಕಾರಿ ರಾಜ ಡಿಸೋಜಾ ಉಪಸ್ಥಿತರಿದ್ದರು.

ADVRTISEMENT

Leave a Reply

Your email address will not be published. Required fields are marked *