ಅಲ್ ಮದ್ರಸತುಲ್ ಮಹಮ್ಮದೀಯ ಮೂಡಬಿದ್ರೆ ಇದರ ವತಿಯಿಂದ 78 ನೇ ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವು ಬೆಳಿಗ್ಗೆ ಗಂಟೆ 7:00 ಸರಿಯಾಗಿ ಮೂಡುಬಿದಿರೆಯ ಲಾಡಿ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮೂಡುಬಿದ್ರೆ ಟೌನ್ ಜುಮಾ ಮಸೀದಿ ಖತೀಬರಾದ ಬಹು. ಅಬೂಬಕ್ಕರ್ ಸಿದ್ದೀಕ್ ದಾರಿಮಿ ಪ್ರಾರ್ಥನೆಗೈದರು.
ಧ್ವಜಾರೋಹಣವನ್ನು ಮೂಡುಬಿದ್ರೆ ಟೌನ್ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ (ಅಬ್ಬುವಾಕ) ನೆರೆವೇರಿಸಿದರು. ಮದ್ರಸ ಮುಖ್ಯೋಪಾಧ್ಯಾಯರಾದ ಬಹು. ರಫೀಕ್ ದಾರಿಮಿ ಮೂಡಬಿದ್ರೆ ಸ್ವಾಗತಿಸಿ, ಲಾಡಿ ಜುಮಾ ಮಸೀದಿ ಖತೀಬರಾದ ಬಹು. ಫಾಯಿಝ್ ಫೈಝಿ ಅಲ್ ಅಝ್ ಹರಿ ಸಂದೇಶ ಭಾಷಣ ಮಾಡಿದರು. ಮುಖ್ಯ ಅಥಿತಿಗಳಾಗಿ ಮೂಡಬಿದ್ರೆ ಆರಕ್ಷಕ ಠಾಣೆ ಸಿಐ ಸಂದೇಶ್ ಕುಮಾರ್, ಕೌನ್ಸಲರ್ ಕರೀಮ್,
ಡಾಕ್ಟರ್ ವಿನಯ ಕುಮಾರ್ ಅಲಂಗಾರ್ ಉಪಸ್ಥಿತರಿದ್ದರು.
Leave a Reply